ಮಳೆ ಹಾನಿ ಸಮೀಕ್ಷೆ : ಸಿಎಂ ಭೇಟಿಗೆ ಹೋಗಲ್ಲ ಎಂದು ನೆರೆ ಸಂತ್ರಸ್ತರ ಆಕ್ರೋಶ!

ನಿನ್ನೆಯಷ್ಟೇ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹಿಂಸಾನಕ್ಕೇರಿದ ಬಸವರಾಜ್ ಬೊಮ್ಮಾಯಿ ಇಂದು ನೆರೆ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಉತ್ತರಕನ್ನಡ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು ಮಳೆ ಹಾನಿ ಸಮೀಕ್ಷೆ ಮಾಡಿ ಅಧಿಕಾರಿಗಳ ಜತೆ ಚರ್ಚಿಸಲಿದ್ದಾರೆ. ಈ ಮೂಲಕ ನೆರೆ ಪಿಡಿತ ಜನರ ಜೊತೆ ತಮ್ಮ ಸರ್ಕಾರ ಇದೆ ಅನ್ನೋದನ್ನ ಮನದಟ್ಟು ಮಾಡೋಕೆ ಮುಂದಾಗಿದ್ದಾರೆ.

ಆದರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೊಡಸಣೆ ಗ್ರಾಮದಲ್ಲಿ ಇಂದು ಸಿಎಂ ಭೇಟಿಗೆ ಹೋಗಲ್ಲ ಎಂದು ನೆರೆ ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ. ‘ಜನಪ್ರತಿನಿಧಿಗಳು ನೆರೆ ಬಂದಾಗ ಬರುತ್ತಾರೆ. ಆಮೇಲೆ ಈಕಡೆಗೆ ತಲೆ ಹಾಕಿ ನೋಡುವುದಿಲ್ಲ. ಕೇವಲ ಭರವಸೆ ಕೊಟ್ಟು ಹೋಗುತ್ತಾರೆ. ಪ್ರಧಾನಿ ಬಂದರೂ ಅಷ್ಟೇ ಮುಖ್ಯಮಂತ್ರಿ ಬಂದರೂ ಅಷ್ಟೇ ನಮ್ಮ ಪರಿಸ್ಥಿತಿ ಬದಲಾಗಲ್ಲ. ಹೀಗಾಗಿ ನಾವು ಸಿಎಂ ಭೇಟಿಗೆ ಹೋಗಲ್ಲ’ ಎಂದು ನೆರೆ ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.

‘ಮನೆಯಲ್ಲಾ ಬಿದ್ದು, ಒಂದು ಬಟ್ಟೆ ಇಲ್ಲದೇ ನಾವು ಕಷ್ಟದಲ್ಲಿದ್ದೇವೆ. ನಮಗೆ ಪರಿಹಾರ ಕೊಡಲೇ ಬೇಕು. ಹೋಗಿ ಕೇಳ್ತೀವಿ. ಕಳೆದ ಬಾರಿ ಪ್ರವಾಹವಾದಾಗ ಆಗ ಸಚಿವರಾದ ಜಗದೀಶ್ ಶೆಟ್ಟರ್ ಕೂಡ ಬಂದು ಭರವಸೆ ನೀಡಿ ಹೋಗಿದ್ದರು. ಆದರೇನು ಪ್ರಯೋಜನವಾಗಿಲ್ಲ. ಈ ಬಾರಿ ಮುಖ್ಯಮಂತ್ರಿ ಬಂದಿದ್ದಾರೆ. ಇವರೂ ಕೂಡ ಭರವಸೆ ಕೊಟ್ಟು ಹೋಗುತ್ತಾರೆ’ ಎಂದು ಅಸಮಧಾನ ಹೊರಹಾಕಿದ್ದಾರೆ.

ಹೀಗೆ ಕೆಲವರು ಸಿಎಂ ತಮ್ಮ ಪರಿಸ್ಥಿತಿ ಬಗ್ಗೆ ಅರಿವು ಮೂಡಿಸಲು ಮೂಂದಾದರೆ, ಇನ್ನೂ ಕೆಲವರು ಸಿಎಂ ಭೇಟಿಗೆ ನಿರಾಕರಿಸಿದ್ದಾರೆ.

ಒಟ್ಟಿನಲ್ಲಿ ಸಿಎಂ ಇಂದು ನೆರೆ ಪ್ರದೇಶಗಳ ಅನ್ವೇಷಣೆಯ ಪ್ರವಾಸದಲ್ಲಿದ್ದು ಬಳಿಕ ಯಾವ ಸಂದೇಶ ರವಾನೆ ಮಾಡ್ತಾರೆ ಕಾದು ನೋಡಬೇಕಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights