ಲಸಿಕೆ ಹಾಕಿಸಿಕೊಳ್ಳದೇ ಕಚೇರಿ ಬರುತ್ತಿದ್ದ ಉದ್ಯೋಗಿಗಳು; ಮೂವರನ್ನು ವಜಾಗೊಳಿಸಿದ ಸಿಎನ್‌ಎನ್‌!

ಲಸಿಕೆ ಹಾಕಿಕೊಂಡೇ ಕಚೇರಿಗೆ ಬರಬೇಕು ಎಂದು ಕಡ್ಡಾಯಗೊಳಿಸಲಾಗಿದ್ದರೂ, ಲಸಿಕೆ ಪಡೆಯದೆಯೇ ಕಚೇರಿಗೆ ಬರುತ್ತಿದ್ದ ಮೂವರು ಉದ್ಯೋಗಿಗಳನ್ನು ಸಿಎನ್‌ಎನ್‌ ಉದ್ಯೋಗದಿಂದ ವಜಾಗೊಳಿಸಿದೆ.

ಕಳೆದ ವಾರದಿಂದ ಮೂವರು ಉದ್ಯೋಗಿಗಳು ಲಸಿಕೆ ತೆಗೆದುಕೊಳ್ಳದೆ ಕಚೇರಿಗೆ ಬರುತ್ತಿದ್ದರು. ಇದು ನಮ್ಮ ಗಮನಕ್ಕೆ ಬಂದಿದ್ದು, ಮೂವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಚಾನೆಲ್ ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.

ಗುರುವಾರ CNN ನ ಹಿರಿಯ ಮಾಧ್ಯಮ ವರದಿಗಾರ ಒಲಿವರ್ ಡಾರ್ಸಿ, ತಮ್ಮ ಟ್ವಿಟರ್‌ ಖಾತೆಯಲ್ಲಿ, “ಕಳೆದ ವಾರದಿಂದ ಕಛೇರಿಗೆ ಲಸಿಕೆ ತೆಗೆದುಕೊಳ್ಳದೆ ಬರುತ್ತಿದ್ದ ಮೂವರು ಉದ್ಯೋಗಿಗಳ ಬಗ್ಗೆ ನಮಗೆ ತಿಳಿದು ಬಂತು. ಮೂವರನ್ನು ಕೆಲಸದಿಂದ ವಜಾ ಮಾಡಲಾಗಿದೆ ” ಎಂದಿದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆ 2022: ಸಮಾಜವಾದಿ ಪಕ್ಷ 400 ಸ್ಥಾನಗಳನ್ನು ಗೆಲ್ಲಬಹುದು; ಬಿಜೆಪಿ ಅಭ್ಯರ್ಥಿಗಳನ್ನೇ ಕಾಣದಿರಬಹುದು:ಅಖಿಲೇಶ್ ಯಾದವ್

’ಅಕ್ಟೋಬರ್ ಮಧ್ಯದಲ್ಲಿ ಎಲ್ಲರು ಕಚೇರಿಗೆ ಹಿಂತಿರುಗುವ ದಿನಾಂಕವನ್ನು ನಿಗದಿಯಾಗಿಸಲಾಗಿತ್ತು. ಆದರೆ ಅದನ್ನು ಸೆಪ್ಟೆಂಬರ್ 7ಕ್ಕೆ ನಿಗದಿ ಮಾಡಲಾಯಿತು. ಈಗ ಅದನ್ನೂ ಕೂಡ ಮುಂದೂಡಲಾಗಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸಿಎನ್‌ಎನ್‌ ನೆಟ್ವರ್ಕ್ ಮುಖ್ಯಸ್ಥರು, ಎಲ್ಲಾ ಉದ್ಯೋಗಿಗಳಿಗೂ ತಮ್ಮ ಬಗ್ಗೆ ಕಾಳಜಿ ವಹಿಸುವಂತೆ ಕೇಳಿಕೊಂಡಿದ್ದಾರೆ. “ನಾವೆಲ್ಲರೂ ನಿರೀಕ್ಷೆ, ಆತಂಕ, ಹತಾಶೆ, ಗೊಂದಲದ ಮಿಶ್ರಣವನ್ನು ಅನುಭವಿಸುತ್ತಿದ್ದೇವೆ. ನನಗೆ ಅರ್ಥವಾಗುತ್ತಿದೆ. ನಿಮ್ಮ ಬಗ್ಗೆ ಕಾಳಜಿ ವಹಿಸುವುದನ್ನು ಮುಂದುವರೆಸಿ ಎಂದಿದ್ದಾರೆ.

ಇನ್ನು ಮೆಮೋನಾ ಕೊನೆಯಲ್ಲಿ”ನೀವು ಕಚೇರಿಗೆ ಬರಲು ಲಸಿಕೆ ಹಾಕಿಸಿಕೊಳ್ಳಬೇಕು. ನೀವು ಇತರ ಉದ್ಯೋಗಿಗಳೊಂದಿಗೆ ಒಂದು ಕ್ಷೇತ್ರದಲ್ಲಿ ಕೆಲಸ ಮಾಡಲು ಲಸಿಕೆ ಹಾಕಿಸಿಕೊಳ್ಳುವುದು ಮುಖ್ಯ” ಎನ್ನಲಾಗಿದೆ.

ಇತ್ತ, ಗೂಗಲ್ ಮತ್ತು ಫೇಸ್‌ಬುಕ್ ಕೂಡ ಕಚೇರಿಗೆ ಮರಳುವ ಕೆಲಸಗಾರರಿಗೆ ಲಸಿಕೆಯನ್ನು ಕಡ್ಡಾಯಗೊಳಿಸಿದೆ.

ಇದನ್ನೂ ಓದಿ: ಖಡ್ಗ ಹಿಡಿದು ಟಿವಿ ಚಾನೆಲ್ ಕಚೇರಿಯಲ್ಲಿ ರೌಡಿಸಂ : ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights