ಎತ್ತರದ ಮೌಂಟ್ ಎವರೆಸ್ಟ್‌‌ ಮತ್ತಷ್ಟು ಎತ್ತರ: ಚೀನಾ-ನೇಪಾಳ

ಭೂಮಿಯ ಮೇಲಿನ ಅತ್ಯಂತ ಎತ್ತರ ಶಿಖರ ಮೌಂಟ್‌ ಎವರೆಸ್ಟ್‌ನ ಎತ್ತರ ಮತ್ತಷ್ಟು ಹಿಗ್ಗಿದೆ. ಎವರೆಸ್ಟ್ ಪರ್ವತವು ಸಮುದ್ರ ಮಟ್ಟಕ್ಕಿಂತ 29,031.69 ಅಡಿ ಎತ್ತರದಲ್ಲಿದ್ದು, ಅದು ನೇಪಾಳ ಸರ್ಕಾರವು ಈ ಹಿಂದೆ ಗುರುತಿಸಿದ್ದ ಎತ್ತರಕ್ಕಿಂತ ಎರಡು ಅಡಿಗಿಂತ ಹೆಚ್ಚು ಎತ್ತರವನ್ನು ಹೊಂದಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ನೇಪಾಳದ ಸರ್ವೆ ಇಲಾಖೆ ಮತ್ತು ಚೀನಾದ ಅಧಿಕಾರಿಗಳು ಇಂದು (ಡಿಸೆಂಬರ್ 8) ಪ್ರಕಟಿಸಿರುವ ಜಂಟಿ ಹೇಳಿಕೆಯಲ್ಲಿ, ಹಿಮಾಲಯ ಪರ್ವತದ ಎತ್ತರ ಇದೀಗ 0.86 ಮೀಟರ್ ನಷ್ಟು ಎತ್ತರವಾಗಿದೆ ಎಂದು ಘೋಷಿಸಿರುವುದಾಗಿ ನ್ಯಾಷನಲ್‌ ಜಿಯಾಗ್ರಫಿ ವರದಿ ಮಾಡಿದೆ.

ಹಿಮಾಲಯ ಪರ್ವತದ ಎತ್ತರ 8644.43 ಮೀಟರ್ ಇತ್ತು. ಆದರೆ ಇದೀಗ ಈ ಎತ್ತರ 8,848 ಮೀಟರ್ ಗೆ ಏರಿಕೆಯಾಗಿದೆ ಎಂದು ನೇಪಾಳ ಮತ್ತು ಚೀನಾ ಸರಕಾರಗಳು ಘೋಷಿಸಿವೆ.

ಬದಲಾಗುತ್ತಿರುವ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಹಿಮಾಲಯದ ಎತ್ತರದಲ್ಲಿ ಏರಿಕೆಯಾಗುತ್ತಿದ್ದು, ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲೂ ಏರಿಕೆಯಾಗಿದ್ದು, ಘೋಷಿತ ರಾಷ್ಟ್ರೀಯ ಉದ್ಯಾನವದ ವಿಸ್ತೀರ್ಣದಲ್ಲೂ ಭಾರೀ ಏರಿಕೆಯಾಗಿದೆ. ಇದರಿಂದ ಹೆಚ್ಚುವರಿ 500 ಮಂದಿಗೆ ಉದ್ಯೋಗವಕಾಶ ಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸುಮಾರು 19 ವರ್ಷಗಳ ನಂತರ ನೇಪಾಳ ಮತ್ತು ಚೀನಾ ಸರಕಾರಗಳು ಹಿಮಾಲಯ ಪರ್ವತದ ಎತ್ತರದ ಸಮೀಕ್ಷೆ ನಡೆಸಿದ ನಂತರ ಈ ಘೋಷಣೆ ಮಾಡಿದ್ದು, ತಜ್ಞರು ಇದೀಗ ಸಂಶೋಧನೆ ಆರಂಭಿಸಿದ್ದಾರೆ.


ಇದನ್ಣೂ ಓದಿ: ಭಾರತ್ ಬಂದ್: ಇದು ಚಾರಿತ್ರಿಕ ಮತ್ತು ನಿರ್ಣಾಯಕ ಹೋರಾಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights