ಮಹಿಳೆಯರ ಮೇಲೆ ಗ್ಯಾಂಗ್‌ರೇಪ್‌; ಸಂಬಂಧಿಕರನ್ನೇ ಅತ್ಯಾಚಾರ ಎಸಗಲು ಬೆದರಿಕೆ; ರಣರಂಗವಾಗಿದೆ ಇಥಿಯೋಪಿಯಾ

ಶಸ್ತ್ರಧಾರಿಗಳಿಂದ ಮಹಿಳೆಯರ ಮೇಲಿನ ಅತ್ಯಾಚಾರ, ಪುರುಷರಿಗೆ ತಮ್ಮ ಕುಟುಂಬದ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವಂತೆ ಬಲವಂತ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಪ್ರಕರಣಗಳ ಸಂಖ್ಯೆ ಇಥಿಯೋಪಿಯದ ಟೈಗ್ರೇ ವಲಯದಲ್ಲಿ ಹೆಚ್ಚಾಗುತ್ತಿವೆ.

ಗನ್‌ ಪಾಯಿಂಟ್‌ನಲ್ಲಿಟ್ಟು ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೆ, ತಮ್ಮದೇ ಕುಟುಂಬದವರ ಮೇಲೆ ಅತ್ಯಾಚಾರ ಎಸಗುವಂತೆ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಇಂತಹ ಹೇಯ ಕೃತ್ಯಗಳಿಂದ ಇಥಿಯೋಪಿಯಾದ ಟೈಗ್ರೇ ವಲಯ ಜಗತ್ತನ್ನೇ ಬೆಚ್ಚಿಬೀಳಿಸಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಇಥಿಯೋಪಿಯಾದ ಉತ್ತರ ರಾಜ್ಯದ 5 ಮೆಡಿಕಲ್​ ಕೇಂದ್ರಗಳಲ್ಲಿ ಈವರೆಗೆ 500ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಆದರೆ, ಅಸಲಿಗೆ ಅದಕ್ಕಿಂತಲೂ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿವೆ. ಶಸ್ತ್ರಾಸ್ತ್ರಸಹಿತ ದುಷ್ಕರ್ಮಿಗಳು ಮಹಿಳೆಯರ ಮೇಲೆ ಅವರ ಕುಟುಂಬದವರ ಎದುರೇ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಸಂಬಂಧಿಕರ ಮೇಲೆ ಅತ್ಯಾಚಾರ ಮಾಡುವಂತೆ ಪುರುಷರಿಗೆ ಬೆದರಿಕೆ ಹಾಕಲಾಗುತ್ತಿರುವುದಾಗಿ ಸಂತ್ರಸ್ತ ಮಹಿಳೆಯರು ಹೇಳಿರುವುದಾಗಿ ಇಥಿಯೋಪಿಯದ ವಿಶ್ವಸಂಸ್ಥೆ ಸಹಾಯಕ ಸಂಯೋಜಕಿಯಾದ ವಾಫಾ ಸೆಡ್ ತಿಳಿಸಿದ್ದಾರೆ.

2020ರ ನವೆಂಬರ್‌ನಲ್ಲಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅವರು ಪ್ರಾದೇಶಿಕ ನಾಯಕರ ವಿರುದ್ಧ ಸರ್ಕಾರದ ಆಕ್ರಮಣವನ್ನು ಘೋಷಿಸಿದರು. ಅಂದಿನಿಂದ ಟೈಗ್ರೇನಲ್ಲಿ ಇಂತಹ ಘೋರ ಘಟನೆಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ.

ನೋಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಪ್ರಧಾನಿ ಅಹ್ಮದ್ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ.  2012ರವರೆಗೆ ಸುಮಾರು 3 ದಶಕಗಳ ಕಾಲ ಇಥಿಯೋಪಿಯಾವನ್ನು ಆಳಿದ ಮತ್ತು ಟೈಗ್ರೇ ವಲಯವನ್ನು ನಿರಂತರ ನಿಯಂತ್ರಣಲ್ಲಿ ಇಟ್ಟುಕೊಂಡಿರುವ ಟಿಇಎಲ್​ಎಫ್​ ಪಕ್ಷವನ್ನು ಗುರಿಯಾಗಿಸಿ ಸರ್ಕಾರ ಆಕ್ರಮಣ ನಡೆಸಲಾಗುವುದು ಎಂದು ತಾವು ಹೇಳಿಕೆ ನೀಡಿಲ್ಲ. ಇಲ್ಲಿ ಎಲ್ಲವನ್ನೂ ಸಂಯುಕ್ತ ರಾಷ್ಟ್ರಗಳ ಅಡಿ ತೆಗೆದುಕೊಂಡು ಬರುವ ಪ್ರಯತ್ನ ಎಂಬ ಆರೋಪ ಸುಳ್ಳು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್ ಲಸಿಕೆಗಳಿಗಾಗಿ ರಾಣಿ ಎಲಿಜಬೆತ್ II ಪಿಎಂ ಮೋದಿಗೆ ಧನ್ಯವಾದ ಅರ್ಪಿಸಿದ್ರಾ?

ಆದರೆ, ಈ ದಾಳಿಗೆ ನೆರೆಯ ಎರಿಟ್ರಿಯಾದ ಸೈನಿಕರರು ಜನಾಂಗೀಯ ಹಿಂಸಾಚಾರದ ಅಲೆ ಹುಟ್ಟಿಸಿದ್ದು, ನಾಗರಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಗಿದ್ದು, ನೂರಾರು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಆಹಾರವಿಲ್ಲದೆ ಉಳಿದಿದ್ದಾರೆ. ಆಂತರಿಕವಾಗಿ ಸ್ಥಳಾಂತರಗೊಂಡ ಹೆಚ್ಚಿನ ಜನರು ತಾವು ಧರಿಸಿದ್ದ ಬಟ್ಟೆಗಳಿಗಿಂತ ಹೆಚ್ಚೇನೂ ಉಳಿದಿಲ್ಲ ಎಂದು ವಾಫಾ ಸೆಡ್​ ವಿಶ್ವಸಂಸ್ಥೆಗೆ ಗುರುವಾರ ತಿಳಿಸಿದರು.

ಎರಿಟ್ರಿಯಾ ಸೈನಿಕರು ನಿರ್ಧಿಷ್ಟವಾಗಿ ಯುವಕರನ್ನು ಕೊಂದಿದ್ದಾರೆ. ಜನರನ್ನು ನಿರಂತರವಾಗಿ ಥಳಿಸಿದ್ದಾರೆ. ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಇದರಿಂದ ಕೆಲವರು ಗರ್ಭವನ್ನು ಧರಿಸಿದ್ದು, ಶಿಶುಗಳನ್ನು ಕಳೆದುಕೊಳ್ಳುವಂತಹ ದಾರಿಯಲ್ಲಿ ಅವರನ್ನು ಸಾಗಿಸಲಾಗಿದೆ ಎಂದು ವಾಫಾ ಆರೋಪಿಸಿದ್ದಾರೆ.

ದೌರ್ಜನ್ಯಗಳು ನಡೆದಿರುವುದು ಸತ್ಯ. ದೌರ್ಜನ್ಯ ಎಸಗಿರುವ ಯಾವುದೇ ಸೈನಿಕರಿಗೆ ಶಿಕ್ಷೆ ನೀಡಲಾಗುವುದು. ಆದರೆ, ಕೆಲವು ಕೆಟ್ಟ ದೌರ್ಜನ್ಯಗಳನ್ನು ಎರಿಟ್ರಿಯಾ ಸೈನಿಕರ ತಲೆಗೆ ಕಟ್ಟಲಾಗಿದೆ ಎಂದು ಎರಿಟ್ರಿಯಾ ಸೈನಿಕರ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.

ಟೈಗ್ರೇ ವಲಯದಲ್ಲಿರುವ ಹಲವಾರು ಪ್ರತ್ಯಕ್ಷದರ್ಶಿಗಳು ಎರಿಟ್ರಿಯಾ ಸೈನಿಕರ ದೌರ್ಜನ್ಯವನ್ನು ರಾಯಿಟರ್ಸ್​ ಮುಂದೆ ಬಿಚ್ಚಿಟ್ಟಿದ್ದಾರೆ. ನಾಗರಿಕರನ್ನು ನಿರಂತರವಾಗಿ ಕೊಂದಿದ್ದು, ಗ್ಯಾಂಗ್​ರೇಪ್​ ಮತ್ತು ಮಹಿಳೆಯರಿಗೆ ಕಿರುಕುಳ ಹಾಗೂ ಮನೆಗೆ ನುಗ್ಗಿ ದರೋಡೆ ಮಾಡಿ ಮೃಗೀಯವಾಗಿ ವರ್ತಿಸಿದ್ದಾರೆಂದು ಅಲ್ಲಿ ನ ಸ್ಥಳೀಯರು ಆರೋಪಿಸಿದ್ದಾರೆ.

ಆದರೆ, ದೌರ್ಜನ್ಯದ ವರದಿಗಳ ಪ್ರಶ್ನೆಗಳಿಗೆ ಎರಿಟ್ರಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಪ್ರಧಾನಿ ಅಹ್ಮದ್​ ಬಹಿರಂಗವಾಗಿ ಒಪ್ಪಿಕೊಂಡ ಕೆಲವು ದಿನಗಳ ಬೆನ್ನಲ್ಲೇ ಟೈಗ್ರೇ ವಲಯವನ್ನು ತೊರೆಯಲು ಎರಿಟ್ರಿಯಾ ಸೈನಿಕರು ಒಪ್ಪಿಕೊಂಡಿದ್ದಾರೆಂದು ಶುಕ್ರವಾರ ಅಹ್ಮದ್​ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವದಲ್ಲಿ ಎಷ್ಟು ಹೆಕ್ಟೆರ್ ಅರಣ್ಯವಿದೆ ಗೊತ್ತಾ..? ಅತಿ ದೊಡ್ಡ 5 ಅರಣ್ಯಗಳ ಪಟ್ಟಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights