POKಯಲ್ಲಿ ಭಾರತೀಯ ಸೇನೆ ‘ಪಿನ್‌ಪಾಯಿಂಟ್ ಏರ್‌ಸ್ಟ್ರೈಕ್’ ಮಾಡಿಲ್ಲ: ಲೆಫ್ಟಿನೆಂಟ್ ಜನರಲ್ ಸ್ಪಷ್ಟನೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಯಾವುದೇ ಪಿನ್‌ಪಾಯಿಂಟ್ ಏರ್‌ಸ್ಟ್ರೈಕ್ ಕೈಗೊಂಡಿಲ್ಲ ಎಂದು ಭಾರತೀಯ ಸೇನಾ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ಪರಮ್‌ಜಿತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿ ಮಾಧ್ಯಮಗಳಾದ ಎಬಿಪಿ ನ್ಯೂಸ್ ಹಾಗೂ ಟೈಮ್ಸ್ ನೌ ಸೇರಿದಂತೆ “ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಾರತೀಯ ಸೇನೆಯು ಭಯೋತ್ಪಾದ ಕೇಂದ್ರಗಳ ಮೇಲೆ ಪಿನ್‌‌ಪಾಯಿಂಟ್ ಏರ್‌ಸ್ಟ್ರೈಕ್ ಮಾಡಿದೆ” ಎಂದು ವರದಿ ಮಾಡಿತ್ತು.

ಆದರೆ ಈ ಬಗ್ಗೆ ಸ್ಫಷ್ಟನೆ ನೀಡಿರುವ ಭಾರತೀಯ ಸೇನಾ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಪರಮ್‌ಜಿತ್‌ ಸಿಂಗ್ “ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಯಾವುದೇ ಕ್ರಮ ಕೈಗೊಂಡಿಲ್ಲ, ನಿಯಂತ್ರಣ ರೇಖೆಯಾದ್ಯಂತ ಭಾರತೀಯ ಸೇನೆಯ ಕ್ರಮಗಳ ಬಗೆಗಿನ ವರದಿಗಳು ನಕಲಿ” ಎಂದು ಹೇಳಿದ್ದಾರೆ. ಈ ಬಗ್ಗೆ ಎಎನ್‌ಐ ವರದಿ ಮಾಡಿದೆ.


ಇದನ್ನೂ ಓದಿ: ಕರ್ನಾಟಕದ ಕಾರ್ಮಿಕರು ಮತ್ತು ಜಪಾನ್‌ ಕಂಪನಿಯ ನಡುವೆ ತಿಕ್ಕಾಟ: ಟೊಯೋಟಾದವರ ಮಾಡುತ್ತಿರುವುದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights