ಸ್ವಾತಂತ್ರ್ಯ ಸೇನಾನಿ HSD ಅವರಿಗೆ 103 ವರ್ಷ: ‘ಮಹಾನ್ ತಾತ’ ಸಾಕ್ಷ್ಯಚಿತ್ರ 103 ಕಡೆ ಪ್ರದರ್ಶನ!

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್ ದೊರೆಸ್ವಾಮಿಯವರ ಹೋರಾಟ ಜೀವನದ ಕುರಿತ ‘ಮಹಾನ್ ತಾತ’ ಸಾಕ್ಷ್ಯಚಿತ್ರವನ್ನು 103 ವರ್ಷದ ದೊರೆಸ್ವಾಮಿಯವರ ಗೌರವಾರ್ಥವಾಗಿ ನಿನ್ನೆ ರಾಜ್ಯದ 103 ಕಡೆಗಳಲ್ಲಿ ಪ್ರದರ್ಶನ ಮಾಡಲಾಗಿದೆ.

ಭೂಹೀನರು, ಗುಡಿಸಲುವಾಸಿಗಳು, ಅಲೆಮಾರಿಗಳು, ಕಾಲೇಜು ವಿದ್ಯಾರ್ಥಿಗಳು, ಗಾಂಧಿವಾದಿಗಳು ಹೀಗೆ ಸಮಾಜದ ನಾನಾ ವಿಭಾಗದ ಜನ ದೊರೆಸ್ವಾಮಿಯವರ ಜೀವನ ಚಿತ್ರಣವನ್ನು ಕಣ್ತುಂಬಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ, ಚಾಮರಾಜನಗರದಲ್ಲಿ, ಶಿಕಾರಿ ಪುರದ ಖಾಸಗಿ ಬಸ್‌ ನಿಲ್ದಾಣದಲ್ಲಿ, ಬೆಂಗಳೂರಿನ ಅರಮನೆ ರಸ್ತೆಯ ಕರ್ನಾಟಕ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಹೀಗೆ ನಾನಾ ಕಡೆ ಹಿರಿಯ ಚೇತನ ನಾಡಿನ ಸಾಕ್ಷಿಪ್ರಜ್ಞೆ ದೊರೆಸ್ವಾಮಿಯ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲಾಗಿದೆ.

ಇನ್ನು ಸಾಗರದಲ್ಲಿ ಪ್ರಜ್ಞಾ ರಂಗತಂಡ ಕ.ರಾ.ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಸ್ವಾತಂತ್ರ್ಯ ಸೇನಾನಿ ಎಚ್.ಎಸ್ ದೊರೆಸ್ವಾಮಿಯವರ ಹೋರಾಟದ ಹೆಜ್ಜೆಗಳ ಮಹಾನ್ ತಾತ ಸಾಕ್ಷ್ಯಚಿತ್ರವನ್ನು ಇಂದಿನಿಂದ ಒಂದು ವಾರಗಳ ಕಾಲ ಸಾಗರದ ಸುತ್ತು ಮುತ್ತಲಿನ ಹತ್ತು ಮನೆಗಳನ್ನು ಗುರುತಿಸಿ ಪ್ರತಿ ದಿನ ಸುತ್ತಮುತ್ತಲಿನ ನಾಗರಿಕರನ್ನು ಒಳಗೊಂಡು ಪ್ರದರ್ಶನ ಮಾಡಲು ಯೋಜಿಸಲಾಗಿದೆ.


ಇದನ್ನೂ ಓದಿ: ದೇಶದಲ್ಲಿ ಫ್ಯಾಸಿಸ್ಟ್‌ ಸರ್ವಾಧಿಕಾರ ಸ್ಥಾಪಿಸಲು ಮೋದಿ ಸರ್ಕಾರ ಯತ್ನಿಸುತ್ತಿದೆ: ಹೆಚ್‌ಎಸ್‌ ದೊರೆಸ್ವಾಮಿ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights