ಪ್ರಯಾಣಿಕರನ್ನು ರೆಕ್ಕೆಯಲ್ಲಿಯೇ ಹೊತ್ತು ವಿಮಾನ ಹಾರಾಟ; ಸಂಚಲನ ಸೃಷ್ಟಿಸಿದ ಫ್ಲೈಯಿಂಗ್ ವಿ

ತನ್ನ ರೆಕ್ಕೆಯಲ್ಲಿಯೇ ಪ್ರಯಾಣಿಕರನ್ನು ಹೊತ್ತು ಸಾಗುವ ಹಾಗೂ ಕಡಿಮೆ ಇಂಧನದಲ್ಲಿ ಹಾರುವ ಫ್ಲೈ-ವಿ ಹೆಸರಿನ ವಿಮಾನ ವನ್ನು ಜರ್ಮನಿ ಯಶ್ವಸ್ವಿಯಾಗಿ ಹಾರಾಟ ನಡೆಸಿದೆ.

ಹೊಸ ರೀತಿಯ ವಿಮಾನ ಆವಿಷ್ಕರಿಸಿರುವ ಜರ್ಮನ್‌, ವಿಮಾನಯಾನ ಕ್ಷೇತ್ರದಲ್ಲಿ ಹೊಸ ಸಂಚನ ಮೂಢಿಸಿದೆ. ಇಂಗ್ಲಿಷ್‌ನ V ಆಕಾರದ ವಿಮಾನವನ್ನು ಜರ್ಮನ್‌ ತಯಾರಿಸಿದ್ದು, ಈ ವಿಮಾನ ತನ್ನ ರೆಕ್ಕೆಯ ಮುಂಭಾಗದಲ್ಲಿ ಪ್ರಯಾಣಿಕರನ್ನು ಇಟ್ಟುಕೊಂಡು ಹಾರಲಿದೆ. ಸರಕು ತುಂಬುವ ಸ್ಥಳ ಮತ್ತು ಇಂಧನ ಟ್ಯಾಂಕ್‌ ಕೂಡ ಇದರ ರೆಕ್ಕೆಯಲ್ಲಿಯೇ ಇದ್ದು,  ಗಾಳಿಯಲ್ಲಿ ಸುಲಭವಾಗಿ ತೇಲುವುದರಿಂದಾಗಿ ಇಂಧನ ಉಳಿತಾಯ ದೃಷ್ಟಿಯಿಂದ ಸೂಕ್ತ ಮಾದರಿ ಎಂದು ಹೇಳಲಾಗಿದೆ.

ಡಚ್‌ ಏರ್‌ಲೈನ್ಸ್‌ ಕೆಎಲ್‌ಎಂ ಸಹಯೋಗದಲ್ಲಿ ನೆದರ್‌ಲೆಂಡ್‌ನ ಡೆಲ್ಫ್ ಯುನಿವರ್ಸಿಟಿಯ ತಂತ್ರಜ್ಞಾನ ವಿಭಾಗ ಇದರ ನಿರ್ಮಾಣ ಮಾಡಿರುವ ಈ ವಿಮಾನ, ಇತರೆ ವಿಮಾನಗಳಿಗಿಂತ ಶೇ.20ರಷ್ಟು ಕಡಿಮೆ ಇಂಧನ ಬಳಕೆಯಾಗಿಲಿದ್ದು, ಭಾನುವಾರ, ಜರ್ಮನಿಯ ವಾಯುನೆಲೆಯಲ್ಲಿ ಯಶಸ್ವಿಯಾಗಿ ವಿಮಾನ ಹಾರಾಟ ನಡೆಸಲಾಗಿದೆ.

”ವಿಮಾನದ ಹಾರಾಟದಲ್ಲಿ ಯಾವುದೇ ಸಮಸ್ಯೆ ಕಾಣಿಸಿಲ್ಲ. ತಿರುಗುವ ಹಂತದಲ್ಲಿ ಸ್ವಲ್ಪ ಮಟ್ಟಿನ ಕ್ಲಿಷ್ಟತೆ ದಾಖಲಾಗಿದೆ. ಲ್ಯಾಂಡಿಂಗ್‌ ಸಂದರ್ಭ ದೊಡ್ಡ ಸಮಸ್ಯೆ ಇದೆ. ಗಡುಸಾಗಿ ರನ್‌ವೇ ಸ್ಪರ್ಶಿಸುವುದರಿಂದ ಪ್ರಯಾಣಿಕರಲ್ಲಿ ದಿಗಿಲು ಮೂಡಿಸುತ್ತದೆ. ರೆಕ್ಕೆಗಳೇ ಅದರ ದೇಹಾಕೃತಿಯಾಗಿರುವುದರಿಂದ ಭೂ ಸ್ಪರ್ಶ ಮಾಡುವಾಗ ತುಂಬ ಸಮನಾಂತರ ಕಾಯ್ದುಕೊಳ್ಳಬೇಕಾಗುತ್ತದೆ. ಇದು ಕಷ್ಟದ ಕೆಲಸ. ಮುಂದಿನ ಹಂತದಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸಲಾಗುವುದು” ಎಂದು ಸಂಶೋಧನಾ ತಂಡದ ಜವಾಬ್ದಾರಿ ಹೊರತ್ತಿರುವ ಡೆಲ್ಫ್‌ ವಿವಿಯ ಪ್ರೊ.ರಾಲೋಫ್‌ ವೋಸ್‌ ತಿಳಿಸಿದ್ದಾರೆ.


ಇದನ್ನೂ ಓದಿ: ಒಂದು ತೆಂಗಿನಕಾಯಿಯಿಂದ 20ಕ್ಕೂ ಹೆಚ್ಚು ಸಸಿಗಳ ಬೆಳೆ: ತಮಿಳುನಾಡು ಕೃಷಿ ವಿವಿ ಆವಿಷ್ಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights