Exclusive Video: ಸಿಕ್ಕಿಬಿದ್ದ ಶೃಂಗೇರಿಯಲ್ಲಿ ಬಾವುಟ ಕದ್ದಿದ್ದ ಕಳ್ಳ: ಸಿಸಿ ಕ್ಯಾಮೆರಾದಲ್ಲಿ ಸೆರೆ!

ಕೋಮು ದ್ವೇಷದ ಬಣ್ಣ ಬಳಿದುಕೊಳ್ಳುವ ಸಂದರ್ಭಕ್ಕೆ ಗುರಿಯಾಗಿದ್ದ ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆಯ ಮೇಲೆ ಮುಸ್ಲಿಂ ಸಂಗಟನೆಯ ಬಾವುಟ ಬಿದ್ದಿದ್ದ ಘಟನೆ ತಿರುವು ಪಡೆದುಕೊಂಡಿದ್ದು, ಸದ್ಯ, ಯಾವುದೇ ಘಟನೆಗೂ ತುತ್ತಾಗದೆ ಶಾಂತಿ ನೆಲೆಸಿದೆ.

ಬಿಜೆಪಿ ಹಾಗೂ ಸಂಘಪರಿವಾರ ಕೋಮು ದ್ವೇಷ ಹರಡಲು ಸಜ್ಜಾಗಿದ್ದ ಶೃಂಗೇರಿಯಲ್ಲಿ ಮುಸ್ಲೀಂ ಬಾವುಟ ಹಾಕಿದ್ದ ಅರೋಪಿ ಹಿಂದೂ ಎಂಬುದು ಬೆಳಕಿಗೆ ಬಂದಿದ್ದ ಉದ್ವಿಗ್ನತೆ ತಣ್ಣಗಾಗಿದೆ.

ಘಟನೆಗೆ ಕಾರಣವೇನು ಎಂಬುದನ್ನು ಶೃಂಗೇರಿ ಪೊಲೀಸರು ಭೇದಿಸಿದ್ದು, ಮಿಲಿಂದ್ ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಹೇಳುವಂತೆ ಆತ ಕುಡಿದ ಮತ್ತಿನಲ್ಲಿ ಚಳಿಯಿಂದ ರಕ್ಷಣೆ ಪಡೆಯಲು ಮಸೀದಿಗೆ ನುಗ್ಗಿ ಬಾವುಟವನ್ನು ಕದ್ದಿದ್ದಾನೆ ಎನ್ನಲಾಗಿದೆ. ಅಲ್ಲದೆ ಆತ ಯಾವುದೆ ರಾಜಕೀಯ ಹಾಗೂ ಯಾವುದೆ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ ಎಂದು ಸ್ಫಷ್ಟೀಕರಣ ನೀಡಿದ್ದಾರೆ.

ಘಟನೆಯ ಸಿಸಿಟಿವಿ ವಿಡಿಯೊಗಳು ಹೊರಬಿದ್ದಿದೆ. ಅವುಗಳನ್ನು ಕೆಳಗೆ ನೋಡಬಹುದಾಗಿದೆ.

Posted by EnSuddi on Friday, August 14, 2020


ಇದನ್ನೂ ಓದಿ:  ಶಂಕರಾಚಾರ್ಯ ಪ್ರತಿಮೆ ಮೇಲೆ ಮುಸ್ಲೀಂ ಸಂಘಟನೆ ಬಾವುಟ! ಕೋಮುಗಲಬೆಗೆ ಸಂಘಿಗಳ ಸಂಚು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights