Dhoni Birthday: ಧೋನಿ ಬಗ್ಗೆ ನೀವು ತಿಳಿದಿಲ್ಲದ ರೋಚಕ ವಿಷಯಗಳು: ಡಿಟೈಲ್ಸ್‌

ಇಂದು ಧೋನಿಯವರ ಹುಟ್ಟಿದ ದಿನ, ಈ ಸಂದರ್ಭದಲ್ಲಿ ಅವರ ಬಗೆಗಿನ ಕೆಲವು ರೋಚಕ ವಿಷಗಳನ್ನು ನೀವು ತಿಳಿಯಲೇಬೇಕು. ಭಾರತೀಯ ಕ್ರಿಕೆಟ್ ಲೋಕದಲ್ಲಿ ಅತಿ ವೇಗವಾಗಿ ಬೆಳೆದ ಆಟಗಾರ ಮಹೇಂದ್ರ ಸಿಂಗ್ ಧೋನಿ…  ಟೀಂ  ಇಂಡಿಯಾಗೆ ಕ್ಯಾಪ್ಟನ್‌ ಆಗಿ ಆಯ್ಕೆಯಾದ ನಂತರದಲ್ಲಿ ಕೂಲ್‌ ಕ್ಯಾಪ್ಟನ್‌ ಎಂದು ಹೆಸರು ಗಳಿಸಿದ ಧೋನಿ ಭಾರತೀಯ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿದ್ದಾರೆ.

ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ಕೂಲ್ ಕ್ಯಾಪ್ಟನ್. ಹೀಗೆ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಗಿಂದು ಹುಟ್ಟುಹಬ್ಬದ ಸಂಭ್ರಮ. ನಾಯಕನ ಚಾಣಕ್ಷತೆ ಹೊರತಾಗಿಯೂ ವಿಕೆಟ್ ಹಿಂದುಗಡೆಯು ಮಿಂಚಿನ ಕೌಶಲ್ಯ ಪ್ರದರ್ಶಿಸುವ ಈ ಮಾಜಿನ ನಾಯಕ ಕುರಿತಾಗಿ ನೀವು ತಿಳಿದುಕೊಳ್ಳಲೇ ಬೇಕಾದ ಕೆಲ ಸಂಗತಿಗಳು ಇಲ್ಲಿವೆ.

ರೈಲ್ವೆ ಇಲಾಖೆಯಲ್ಲಿ ಸಣ್ಣ ಕೆಲಸ ಮಾಡಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಬೆಳೆದ ಕತೆಯೇ ಒಂದು ರೋಚಕ ಅಧ್ಯಾಯ. ಅದರಲ್ಲಿ ಹಲವಾರು ಏಳು ಬೀಳುಗಳಿವೆ.

2007ನೇ ಇಸವಿಯಲ್ಲಿ ಎಂ ಎಸ್ ಧೋನಿ ಅವರನ್ನು ನಾಯಕರನ್ನಾಗಿ ನೇಮಕ ಮಾಡುವಂತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶಿಫಾರಸು ಮಾಡಿದ್ದರು. ಉಳಿದವು ಇದೀಗ ಇತಿಹಾಸವೇ ಸರಿ.

ಧೋನಿಗೆ ಶ್ವಾನಗಳೆಂದರೆ ಮೊದಲಿನಿಂದಲೂ ಅಚ್ಚು-ಮೆಚ್ಚು. 2013 ರಲ್ಲಿ ಬೀದಿ ನಾಯಿಗಳನ್ನು ಧೋನಿ ದತ್ತು ತೆಗೆದುಕೊಂಡಿದ್ದು ಸುದ್ದಿಯಾಗಿತ್ತು. ಐಪಿಎಲ್ ಸಂದರ್ಭದಲ್ಲಿ ಧೋನಿ ನಾಯಿಗಳೊಂದಿಗೆ ಆಟ ಆಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು.

ಕಪಿಲ್ ದೇವ್ ಬಳಿಕ ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆ ಟೀಂ ಇಂಡಿಯಾದ ಎರಡನೇ ಕ್ರಿಕೆಟಿಗನಾಗಿದ್ದಾರೆ. 2011 ನವೆಂಬರ್ 01 ರಂದು ಧೋನಿಗೆ ಈ ಪದವಿ ನೀಡಿ ಗೌರವಿಸಲಾಗಿತ್ತು.

ಎಲ್ಲರೊಂದಿಗೂ ಸ್ನೇಹ ಪರವಾಗಿ ನಡೆದುಕೊಳ್ಳುವ ಧೋನಿಗೆ ಬಾಲಿವುಡ್ ನಟಿ ಬಿಪಾಶಾ ಬಸು ನೆಚ್ಚಿನ ಗೆಳತಿ. ಧೋನಿ ಸಾಕ್ಷಿ ಅವರನ್ನು ಮದುವೆಯಾಗುವುದಕ್ಕೂ ಮುನ್ನ ರೂಮರ್​ಗಳು ಕೇಳಿ ಬಂದಿದ್ದವು. ಮದುವೆಯಾದ ನಂತರವೂ ಇವರ ಗೆಳೆತನ ಹಾಗೆ ಇದೆ.ತಮ್ಮ ಮಿತ್ರ ಹಾಗೂ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರಿಂದ ಪ್ರೇರಣೆ ಪಡೆದುಕೊಂಡು ತಮ್ಮ ವೃತ್ತಿ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಧೋನಿ ಅವರು ಉದ್ದವಾದ ಕೂದಲನ್ನು ಬೆಳೆಸಿದ್ದರು.

ಆಹಾರದ ವಿಷಯಕ್ಕೆ ಬಂದರೆ  ಧೋನಿಗೆ ಎಲ್ಲವೂ ಇಷ್ಟ. ಆದರೆ ಚಿಕನ್ ಅಂದ್ರೆ ಸ್ವಲ್ಪ ಹಿಂದಕ್ಕೆ ಹೆಜ್ಜೆ ಇಡುತ್ತಾರೆ. ಇನ್ನು ಹಾಲು ಕುಡಿಯುವುದರಲ್ಲಿ ಮಹಿ ಮೀರಿಸಿದವರು ಯಾರೂ ಇಲ್ಲ ಬಿಡಿ! ಚಿಕನ್ ಬಟರ್ ಮಸಾಲಾ, ಕಬಾಬ್, ಚಿಕನ್ ಟಿಕ್ಕಾ ಪಿಜ್ಜಾ ಸಹ ಧೋನಿಗೆ ಇಷ್ಟವಾಗುತ್ತಂತೆ.

ಫುಟ್ಬಾಲ್ ಹೊರತಾಗಿ ರೆಸ್ಲಿಂಗ್ ಸಹ ಇಷ್ಟಪಡುತ್ತಾರೆ. ಡಬ್ಲ್ಯುಡಬ್ಲ್ಯುಇ ರಿಂಗ್‌ನಲ್ಲಿ ಬ್ರೆಟ್ ಹಾರ್ಟ್ ಮತ್ತು ಹಲ್ಕ್ ಹೋಗನ್ ಫೇವರಿಟ್ ಆಗಿದ್ದಾರೆ.

2007 ನವೆಂಬರ್‌ನಲ್ಲಿ ಕೋಲ್ಕತ್ತಾದಲ್ಲಿ ಸಾಕ್ಷಿ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಅಂದು ಈಡೆನ್ ಗಾರ್ಡೆನ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ನಡೆದಿತ್ತು.


ಇದನ್ನೂ ಓದಿ: Cricket: ಧೋನಿ ಮುಂದಿನ ನಿರ್ಧಾರ ಕೇಳಿದ್ರೆ ಅಚ್ಚರಿಪಡ್ತೀರಾ..! ಮುಗೀತಾ ಧೋನಿ ದುನಿಯಾ..?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights