ಕ್ಯಾಂಪಸ್ ಒಳಗೆ ಮದ್ರಾಸ್ ಐಐಟಿ ಉಪನ್ಯಾಸಕರ ಸುಟ್ಟ ದೇಹ ಪತ್ತೆ!

ಚೆನ್ನೈನ ಪ್ರತಿಷ್ಠಿತ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಉಪನ್ಯಾಸಕರೊಬ್ಬರ ಸುಟ್ಟ ದೇಹ ಪತ್ತೆಯಾಗಿದೆ.

ಮದ್ರಾಸ್ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಕ್ಯಾಂಪಸ್ ಒಳಗೆ ಉಪನ್ಯಾಸಕರ ಸುಟ್ಟ ದೇಹ ಗುರುವಾರ ಪತ್ತೆಯಾಗಿದೆ. ಹಾಕಿ ಮೈದಾನದ ಬಳಿ ಶವ ಪತ್ತೆಯಾಗಿದ್ದು ಸಂಸ್ಥೆಯ ಕ್ರೀಡಾ ಅಧಿಕಾರಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.

ಮೃತ ವ್ಯಕ್ತಿಯನ್ನು 30 ವರ್ಷದ ಉನ್ನಿಕೃಷ್ಣನ್ ನಾಯರ್ ಎಂದು ಗುರುತಿಸಲಾಗಿದೆ. ಅವರು ಏಪ್ರಿಲ್ 2021 ರಲ್ಲಿ ಬಿ.ಟೆಕ್ ಮುಗಿಸಿ ಐಐಟಿ ಮದ್ರಾಸ್‌ಗೆ ಪ್ರಾಜೆಕ್ಟ್ ಅಸೋಸಿಯೇಟ್ ಮತ್ತು ಅತಿಥಿ ಉಪನ್ಯಾಸಕರಾಗಿ ಸೇರಿದ್ದರು.

ಇವರು ಗುರುವಾರ ಬೆಳಿಗ್ಗೆವಷ್ಟೇ ಕೇರಳದಿಂದ ಕ್ಯಾಂಪಸ್‌ಗೆ ಮರಳಿದ್ದರು ಎಂದು ವರದಿಯಾಗಿದೆ. ನಿತ್ಯ ಅಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಒಟ್ಟುಗೂಡುತ್ತಿದ್ದ ಹಾಕಿ ಮೈದಾನದ ಬ ಳಿ ಉಪನ್ಯಾಸಕರ ಸುಟ್ಟ ದೇಹ ಪತ್ತೆಯಾಗಿದೆ. ಕೊಟ್ಟೂರ್ಪುರಂ ಪೊಲೀಸರು ಶವವನ್ನು ಸರ್ಕಾರಿ ರಾಯಪೆಟ್ಟ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಉನ್ನಿಕೃಷ್ಣನ್, ಅವರ ತಂದೆ ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಯ ಉದ್ಯೋಗಿಯಾಗಿದ್ದು, ಇಬ್ಬರು ಕೊಠಡಿ ಸಹವಾಸಿಗಳೊಂದಿಗೆ ಚೆನ್ನೈನ ವೇಲಾಚೇರಿ ಪ್ರದೇಶದಲ್ಲಿ ವಾಸಿಸುತ್ತಿದ್ದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights