ಬೆಳಗಾವಿ: ಕೊನೆ ಕ್ಷಣದಲ್ಲಿ ಗೆಲುವು ಕಂಡ BJP ಅಭ್ಯರ್ಥಿ ಮಂಗಳಾ ಅಂಗಡಿ!
ಮತ ಎಣಿಕೆ ಆರಂಭವಾದಾಗಿನಿಂದಲೂ ರಾಜ್ಯದ ಚಿತ್ತವನ್ನು ಸೆಳೆದಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರು ಕೊನೆಯ ಕ್ಷಣದಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿದ್ದ ಸತೀಶ್ ಜಾರಕಿಹೊಳಿ ಅವರ ವಿರುದ್ಧ 2,912 ಮತಗಳ ಅಂತರದಲ್ಲಿ ಅಂಗಳಾ ಅಂಗಡಿ ಗೆದ್ದಿದ್ದಾರೆ.
ಬೆಳಗ್ಗೆ ಮತದಾನ ಅರಂಭವಾದಾಗಿನಿಂದಲೂ ಇಬ್ಬರ ಫಲಿತಾಂಶದಲ್ಲಿಯೂ ಹಾವು-ಏಣಿ ಆಟ ಆರಂಭವಾಗಿತ್ತು. ಒಂದು ಸುತ್ತಿನಲ್ಲಿ ಸತೀಶ್ ಮುನ್ನಡೆ ಸಾಧಿಸಿದರೆ, ಮತ್ತೊಂದು ಸುತ್ತಿನಲ್ಲಿ ಮಂಗಳಾ ಮುನ್ನಡೆ ಸಾಧಿಸುತ್ತಿದ್ದರು. ಒಟ್ಟು 80 ಸುತ್ತಿನ ಮತ ಎಣಿಕೆಯಲ್ಲಿ ಕೊನೆಗೂ ಮಂಗಳಾ ಅಂಗಡಿ ಗೆದ್ದು ಬೀಗಿದ್ದಾರೆ.
ಮಂಗಳಾ ಅಂಗಡಿ ಅವರು 4,35,202 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸತೀಶ್ ಜಾರಕಿಹೊಳಿ ಅವರು 4,32,299 ಮತಗಳನ್ನು ಪಡೆದು ಸೋಲುಂಡಿದ್ದಾರೆ.
ಜಾರಕಿಹೊಳಿ ಕುಟುಂಬವು ಪ್ರಭಾವ ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿತ್ತು. ಅಂತಿಮವಾಗಿ ಬಿಜೆಪಿ ಗೆಲುವು ಸಾಧಿಸಿದೆ, ಸುರೇಶ್ ಅಂಗಡಿಯವರ ಸಾವಿನ ಅನುಕಂಪದ ಅಲೆಯು ಮಂಗಳಾ ಅವರ ಗೆಲುವಿಗೆ ಕಾರಣವಾಗಿದ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬಸವ ಕಲ್ಯಾಣದಲ್ಲಿ BJP ಅಭ್ಯರ್ಥಿ ಶರಣು ಸಲಗರ ಗೆಲುವು: ಕಾಂಗ್ರೆಸ್‌ಗೆ ಭಾರೀ ನಿರಾಶೆ!