Badminton : ವಿಶ್ವ ಬ್ಯಾಡ್ಮಿಂಟನ್ ಗೆದ್ದ ಮೊದಲ ಭಾರತೀಯರೆನಿಸಿದ ಸಿಂಧು

ಭಾರತದ ಹೆಮ್ಮಯ ಆಟಗಾರ್ತಿ ಪಿವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬಾಸೆಲ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಮಪಿಯನ್‌ಶಿಪ್‌ ಅನ್ನು ಸಿಂಧು ಗೆದ್ದುಕೊಂಡಿದ್ದಾರೆ.

ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಭಾರತದ ಮೊಟ್ಟ ಮೊದಲ ಬ್ಯಾಡ್ಮಿಂಟನ್ ಪಟು ಎಂಬ ಹೆಗ್ಗಳಿಕ ಮತ್ತು ಇತಿಹಾಸಕ್ಕೆ ಸಿಂಧು ಪಾತ್ರರಾಗಿದ್ದಾರೆ. ಕಳೆದೆರಡು ವರ್ಷ ಫೈನಲ್‌ನಲ್ಲಿ ಸೋಲನುಭವಿಸಿದ್ದ ಸಿಂಧು ಭಾನುವಾರದ ಮುರನೇ ಪ್ರಯತ್ನದಲ್ಲಿ ವಿಶ್ವ ಕಿರೀಟ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿಂಧು ತಮಗಿಂತ ಹೆಚ್ಚಿನ ಶ್ರೇಯಾಂಕ ಹೊಂದಿದ್ದ ಜಪಾನಿನ ನಜೋಮಿ ಒಕುಹಾರಾ ಅವರನ್ನು ಕೇವಲ 16 ನಿಮಿಷಗಳಲ್ಲಿ 21-7, 21-7ರಲ್ಲಿ ಪರಾಭವಗೊಳಿಸಿ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಬಿರುಗಾಳಿಯಂತೆ ಪಂದ್ಯ ಆರಮಭಿಸಿದ ಸಿಂಧು ಎದುರಾಳಿ ಇನ್ನೂ ಕೋರ್ಟಿನ ಆಳ-ಅಗಲ ತಿಳಿದುಕೊಳ್ಳುವ ಮುನ್ನವೇ ಡಜನ್ ಅಂಕಗಳ ಮುನ್ನಡೆ ಸಾಧಿಸಿದರು!. ಒಕುಹಾರಾಗೆ ಯಾವುದೇ ಅವಕಾಶ ನೀಡದೇ ಆಡಿದ ಸಿಂಧು 21-7 ಅಂಕಗಳಿಂದ ಗೆದ್ದು ಮುನ್ನಡೆದರು.

ಎರಡನೇ ಗೇಮ್‌ನಲ್ಲಿ ಸಹ ಅದೇ ಅಧಿಕಾರ ಚಲಾಯಿಸಿದ ಸಿಂಧು ಪಂದ್ಯಕ್ಕೆ ವಾಪಸ್ ಮರಳಲು ಎದುಉರಾಳಿ ಒಕುಹಾರಾಗೆ ಯಾವುದೇ ಆಸಪದ ನೀಡದೇ 21-7ರಲ್ಲಿ ಜಯ ಸಾಧಿಸಿ ಪ್ರಶಸ್ತಿಗೆ ಕೊರಳೊಡ್ಡಿದರು.

ಇದಕ್ಕೆ ಮುನ್ನ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು 21-7, 21-14 ನೇರ ಗೇಮ್‌ಗಳಲ್ಲಿ ಚೀನಾದ ಚೆನ್ ಯುಫೀ ವಿರುದ್ಧ ಅಧಿಕಾರಯುತ ಜಯ ಸಾಧಿಸಿ ಸತತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights