ಉದ್ದ ಕೂದಲು ಬೆಳೆಸಿದ್ದಕ್ಕಾಗಿ ಕಲಾವಿದನ ಬಂಧನ!

ಉದ್ದ ಕೂದಲು ಬಿಟ್ಟಿದ್ದಕ್ಕಾಗಿ ಕಲಾವಿದನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ.

ಪಾಕಿಸ್ತಾನದ ಅಬುಜರ್ ಮಧು ಎಂಬ ಕಲಾವಿದನನ್ನು ಲಾಹೋರ್‌ನಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದರು ಮತ್ತು ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಒಂದು ರಾತ್ರಿ ಬಂಧನದಲ್ಲಿಟ್ಟಿದ್ದರು. ಆತ ತನ್ನ ಬಂಧನಕ್ಕೆ ಕಾರಣವೇನು ಎಂದು ಕೇಳಿದಾಗ, ಪೊಲೀಸರು ಆತ ಉದ್ದ ಕೂದಲು ಬೆಳಿಸಿರುವ ಕಾರಣಕ್ಕೆರ ಬಂಧಿಸಿದ್ದೇವೆ ಎಂದು ಹೇಳಿರುವುದಾಗಿ ಆತನ ಸ್ನೇಹಿತೆ ನತಾಶಾ ಜಾವೇದ್ ಟ್ವೀಟ್‌ ಮಾಡಿದ್ದಾರೆ.

“ಅಬುಜರ್ ಒಬ್ಬ ಕಲಾವಿದ ಮತ್ತು ಶಿಕ್ಷಕ. ಅವರು ಕಲ್ಮಾ ಚಾಕ್ ಬಳಿ ರಿಕ್ಷಾಗಾಗಿ ಕಾಯುತ್ತಿದ್ದಾಗ ಪೊಲೀಸರು ಅವರ ಬಳಿ ಬಂದು ಗುರುತಿನ ಚೀಟಿಯನ್ನು ತೋರಿಸಲು ಕೇಳಿದ್ದಾರೆ. ಅವರು ಗುರುತಿನ ಚೀಟಿ ತೋರಿಸಿದರೂ ಸಹ ಅವರನ್ನು ಬಂಧಿಸಿ ಕರೆದೊಯ್ಯಲಾಯಿತು” ಎಂದು ಜಾವೇದ್ ಹೇಳಿದ್ದಾರೆ.

“ತನ್ನನ್ನು ಬಂಧಿಸಿದ್ದರ ಕಾರಣ ಕೇಳಿದರೆ “ನೀನು ದುರುಗುಟ್ಟುಕೊಂಡು ನೋಡುತ್ತಿದ್ದೆ. ಉದ್ದ ಕೂದಲು ಬೆಳಿಸಿದ್ದೆ. ಅಲ್ಲದೇ ಮುಂಜಾನೆ 3 ಗಂಟೆ ಸಮಯದಲ್ಲಿ ರಸ್ತೆಯಲ್ಲಿದ್ದೀಯ ಎಂಬ ಕಾರಣದಿಂದಲೂ ಬಂಧನ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾಗಿ ಅಬುಜಾರ್‌” ತಿಳಿಸಿದರು.

ನತಾಶಾ ಜಾವೇದ್ ಘಟನೆಯ ಕುರಿತು ದೀರ್ಘವಾಗಿ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಅವರ ಪ್ರಕಾರ, “ಯಾವುದೇ ಕಾರಣವಿಲ್ಲದೆ ಅಬುಜಾರ್‌ನನ್ನು ಬಂಧಿಸಲಾಯಿತು. ಈ ಬಗ್ಗೆ ಅವರು ಪ್ರಶ್ನಿಸಿದಾಗ ಅವರಿಗೆ ಬೆದರಿಕೆ ಒಡ್ಡಲಾಯಿತು. ಅವರ ಮೇಲೆ ದೌರ್ಜನ್ಯವೆಸಗಿ ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತೆ ಮಾಡಲಾಯಿತು. ಮಾರನೇಯ ದಿನ ಸ್ನೇಹಿತರ ಮಧ್ಯಪ್ರವೇಶದಿಂದ ಅವರನ್ನು ಬಿಡುಗಡೆ ಮಾಡಲಾಯಿತು” ಎಂದು ಆರೋಪಿಸಿದ್ದಾರೆ.

ಅವರನ್ನು ಏಕೆ ಬಂಧಿಸಲಾಯಿತು? ಅಬುಜಾರ್‌ ರಿಕ್ಷಾಗೆ ಕಾಯುತ್ತಿದ್ದರೆ ಹೊರತು ಅವರು ಖಾಸಗಿ ಕಾರ್‌ನಲ್ಲಿ ಕುಳಿತಿರಲಿಲ್ಲ.. ಅವರು ಉದ್ದನೆಯ ಕೂದಲು ಬಿಟ್ಟಿದ್ದರು.. ಅವರು ಹೇಗೆ ಕಾಣುತ್ತಿದ್ದಾರೆ ಎಂಬ ಕಾರಣದಿಂದ ಅವರನ್ನು ಬಂಧಿಸಬಹುದೇ? ಅವರು ಯಾವುದೇ ತಪ್ಪು ಮಾಡದೇ, ಸಮರ್ಪಕ ವಿಚಾರಣೆ ನಡೆಸದೇ ಬಂಧಿಸಬಹುದೆ? ಸೈಪುಲ್ಲ ಎಂಬ ಪೊಲೀಸ್ ಅಧಿಕಾರಿ ಬೇಕಂತಲೇ ಕಿರುಕುಳ ನೀಡಿದ್ದಾರೆ. ಈ ರೀತಿ ಅಧಿಕಾರ ದುರ್ಬಳಕೆ ಮಾಡಿದ ನಂತರವೂ ಅವರಿಗೆ ಯಾವುದೇ ಶಿಕ್ಷೆ ಇಲ್ಲ ಏಕೆ? ಎಂದು ಅವರ ಗೆಳತಿ ನತಾಶಾ ಜಾವೇದ್ ಪ್ರಶ್ನಿಸಿದ್ದಾರೆ.

ನತಾಶಾರವರ ಪೋಸ್ಟ್ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ತದನಂತರ ಬಹುತೇಕರು ಪಾಕ್ ಪೊಲೀಸ್ ದೌರ್ಜನ್ಯವನ್ನು ತೀವ್ರ ಪದಗಳಲ್ಲಿ ಟೀಕಿಸಿದ್ದಾರೆ. ಈ ದೇಶದಲ್ಲಿ ಕೂದಲು ಬೆಳೆಸುವುದು ಅಪರಾಧವೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಿಹಾರ LJP ಪಕ್ಷದಲ್ಲಿ ಬಂಡಾಯ; ಚಿರಾಗ್‌ ನಾಯಕತ್ವ ಬದಲಾವಣೆಗೆ ಸಿಎಂ ನಿತೀಶ್‌ ಕುಮಾರ್ ಸಂಚು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights