ಅಭಿಮಾನಿಗಳಿಗೆ ಅಪ್ಪು ಸ್ಪೂರ್ತಿ; ನೇತ್ರದಾನ ಮಾಡಲು ಅಭಿಮಾನಿಗಳ ಸರತಿ ಸಾಲು!

ಕಳೆದ ಎರಡು ದಿನಗಳಿಂದ ಸರತಿ ಸಾಲಿನಲ್ಲಿ ಇಂತಿರುವ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳ ಸಂಖ್ಯೆಯನ್ನು ನೋಡಿ ಬಳ್ಳಾರಿ ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ತಮ್ಮ ಕಣ್ಣುಗಳನ್ನು ದಾನ ಮಾಡಿದ್ದ ಅಪ್ಪು ಅವರಿಂದ ಸ್ಪೂರ್ತಿ ಪಡೆದ ಬಳಿಕ, ಅವರ ಅಭಿಮಾನಿಗಳು, ತಾವೂ ನೇತ್ರದಾನ ಮಾಡಲು ಜೇನುನೊಣಗಳ ರೀತಿಯಲ್ಲಿ ಸಾಲಿನಲ್ಲಿ ತುಂಬಿಹೋಗಿದ್ದಾರೆ.

ಪುನೀತ್‌ ಅಭಿಮಾನಿಗಳು ತಮ್ಮ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡವ ಪ್ರತಿಜ್ಞೆಗೆ ಮುಂದಾಗಿದ್ದಾರೆ. ಹೀಗಾಗಿ, ಹಲವರು ಆಸ್ಪತ್ರೆಗಳಿಗೆ ತೆರಳಿ ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ಬರೆದುಕೊಡುತ್ತಿದ್ದಾರೆ. ಅದಕ್ಕಾಗಿ ಆಸ್ಪತ್ರೆ ಮತ್ತು ಖಾಸಗಿ ವೈದ್ಯರಿಗೆ ಕರೆ ಮಾಡಿ, ನೇತ್ರದಾನದ ವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಇದೇ ಮೊದಲು: ಪುನೀತ್ ಅವರ ಕಣ್ಣುಗಳನ್ನು ಇಬ್ಬರಿಗಲ್ಲ, ನಾಲ್ವರಿಗೆ ದಾನ ಮಾಡಲಾಗಿದೆ!

ಪುನೀತ್ ಅವರ ತಂದೆ ಡಾ ರಾಜ್‌ಕುಮಾರ್ ನಿಧನರಾದಾಗ ಅವರ ಕಣ್ಣುಗಳನ್ನು ದಾನ ಮಾಡಿದ್ದರು. ಆಗಲೂ ಇದೇ ರೀತಿಯ ಭಾವನೆ ಕಂಡುಬಂದಿತ್ತು. ಇದೀಗ ಪುನೀತ್‌ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ರಾಜ್‌ಕುಮಾರ್ ಕುಟುಂಬದ ಅಭಿಮಾನಿಗಳು ತಮ್ಮ ಕಣ್ಣುಗಳನ್ನು ತಮ್ಮ ನೆಚ್ಚಿನ ಸ್ಟಾರ್‌ಗಳಂತೆ ಕಣ್ಣುಗಳನ್ನು ಒತ್ತೆಯಿಡಲು ಮುಂದಾಗಿದ್ದಾರೆ.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರು ಹಲವಾರು ಸಿನಿಮಾಗಳನ್ನು ಚಿತ್ರೀಕರಿಸಿದ್ದಾರೆ. ಹೀಗಾಗಿ, ಈ ಎರಡೂ ಜಿಲ್ಲೆಗಳಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಪುನೀತ್ ಅವರ ಸರಳತೆ ಮತ್ತು ಇಲ್ಲಿನ ಜನರೊಂದಿಗೆ ಬೆರೆಯುತ್ತಿದ್ದ ಅವರ ಸ್ವಭಾವ ಬಹಳ ಹಿಂದೆಯೇ ಈ ಭಾಗದ ಜನರ ಮನ ಗೆದ್ದಿದೆ. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡ ಅಭಿಮಾನಿಗಳು, ಪುನೀತ್  ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ನೇತ್ರದಾನದ ವಾಗ್ದಾನ ಕೈಗೊಳ್ಳುತ್ತಿರುವುದು ಹೆಚ್ಚಾಗಿದೆ.

ಅಪ್ಪು ಅಭಿಮಾನಿಗಳ ಆಶಯದಂತೆ ಹೊಸಪೇಟೆಯಲ್ಲಿ ಪುನೀತ್ ರಾಜ್ ಕುಮಾರ್ ಪ್ರತಿಮೆ ಸ್ಥಾಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಈಗಾಗಲೇ ಹೇಳಿದ್ದಾರೆ. ಬಳ್ಳಾರಿ ಮತ್ತು ವಿಜಯನಗರದ ಅಭಿಮಾನಿಗಳು ದೇಣಿಗೆ ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಪುನೀತ್‌ ವಿರುದ್ದ ಅವಹೇನಾಕಾರಿ ಪೋಸ್ಟ್‌; ಆರೋಪಿ ಬಂಧನ

ಬೆಂಗಳೂರಿನ ವೈದ್ಯರ ತಂಡವು ಅಪ್ಪು ಅವರ ಕಣ್ಣುಗಳನ್ನು ತೆಗೆದುಕೊಂಡು, ಆಧುನಿಕ ತಂತ್ರಜ್ಞಾನದೊಂದಿಗೆ ಕಸಿ ಮಾಡಿ ನಾಲ್ಕು ಜನರಿಗೆ ಕಣ್ಣುಗಳನ್ನು ದಾನ ಮಾಡಿದ ಕ್ಷಣವು ಹಲವಾರು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಹಲವರು ತಮ್ಮ ಕಣ್ಣುಗಳನ್ನೂ ತಾವು ನಿಧನಹೊಂದಿದ ಬಳಿಕ ಅದೇ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.

ಬಳ್ಳಾರಿ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅಧಿಕಾರಿ ಡಾ.ಸಿ.ರಾಜಶೇಖರ್ ರೆಡ್ಡಿ ಮಾತನಾಡಿ, ಕಳೆದ ಎರಡು ದಿನಗಳಿಂದ ಅನೇಕರು ನೇತ್ರದಾನ ಮಾಡುವ ಬಗ್ಗೆ ವಿಚಾರಿಸುತ್ತಿದ್ದಾರೆ. “ಇದು ಸರಳ ಪ್ರಕ್ರಿಯೆಯಾಗಿದ್ದು, ಫಾರ್ಮ್ ಅನ್ನು ಭರ್ತಿ ಮಾಡಬೇಕು. ಫಾರ್ಮ್‌ನಲ್ಲಿ ವೈಯಕ್ತಿಕ ವಿವರಗಳನ್ನು ನೀಡಬೇಕು. ದಾನಕ್ಕಾಗಿ ತಮ್ಮ ಕಣ್ಣುಗಳನ್ನು ಒತ್ತೆ ಇಟ್ಟಿರುವ ವ್ಯಕ್ತಿಯು ಸತ್ತರೆ ಹತ್ತಿರದ ಕುಟುಂಬದ ಸದಸ್ಯರು ವೈದ್ಯಕೀಯ ತಂಡಕ್ಕೆ ತಿಳಿಸುತ್ತಾರೆ. ದಾನಿಯ ಮರಣದ ಆರು ಗಂಟೆಗಳ ಒಳಗೆ ನಾವು ಅವರ ಕಣ್ಣುಗಳನ್ನು ತೆಗೆದುಕೊಳ್ಳುತ್ತೇವೆ. ಅಲ್ಲದೆ, ನಾವು ನೇತ್ರದಾನ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಯೋಜಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಪುನೀತ್ ನಿಧನದ ನೋವನ್ನು ಸಹಿಸಲಾಗದೆ ಹಲವು ಅಭಿಮಾನಿಗಳು ಪ್ರಾಣ ತೆತ್ತಿದ್ದಾರೆ. ಪುನೀತ್ ಅವರಂತೆಯೇ ತಾನೂ ಕಣ್ಣುಗಳನ್ನು ದಾನ ಮಾಡುತ್ತೇನೆ ಎಂದು ಹೇಳಿದ್ದ ಬೆಂಗಳೂರಿನ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡ ಸ್ಟಾರ್‌ಗಳ ‘ಫ್ಯಾನ್ಸ್‌ ವಾರ್‌’ಗೆ ಫುಲ್‌ಸ್ಟಾಪ್; ಯುನೈಟ್ ಕೆಎಫ್‌ಐ ಅಭಿಯಾನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights