ಖಾತೆ ಹಂಚಿಕೆ ತಗಾದೆ; ಸಚಿವ ಆನಂದ್‌ ಸಿಂಗ್‌ ಭಾನುವಾರ ರಾಜೀನಾಮೆ!?

ರಾಜ್ಯದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಿದೆ. ಆದರೆ, ಹಲವರಿಗೆ ತಮಗೆ ನೀಡಲಾಗಿರುವ ಖಾತೆಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಈ ಪೈಕಿ ಸಚಿವ ಆನಂದ್‌ ಸಿಂಗ್‌ ತಮ್ಮ ಖಾತೆ ಬದಲಿಸಿಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಸಿಎಂ ಬೊಮ್ಮಾಯಿ ಇದಕ್ಕೆ ಮಣೆ ಹಾಕದ ಕಾರಣ, ನಾಳೆ ಸಚಿವ ಸ್ಥಾನಕ್ಕೆ ಆನಂದ್‌ ಸಿಂಗ್‌ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾತ್ರವಲ್ಲದೆ, ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ನಾಳೆ ಸ್ವಾತಂತ್ರ್ಯ ದಿನಾಚರಣೆ ಇರುವುದರಿಂದ ಹೊಸದಾಗಿ ಜಿಲ್ಲೆಯಾಗಿರುವ ವಿಜಯನಗರದ ಕೇಂದ್ರ ಹೊಸಪೇಟೆಯಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಅವರು ಬೆಂಗಳೂರಿಗೆ ತೆರಳಲಿದ್ದು, ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಲಿದ್ದಾರೆ.

ಭೇಟಿಯ ನಂತರ, ಬೊಮ್ಮಾಯಿ ಅವರು ಖಾತೆ ಬದಲಿಸಲು ಒಪ್ಪದಿದ್ದರೆ, ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಆನಂದ್ ಸಿಂಗ್ ಸಚಿವರಾದ ಬಳಿಕ ಇದುವರೆಗೂ ವಿಧಾನಸಭೆಗೆ ಕಾಲಿಟ್ಟಿಲ್ಲ. ಅಲ್ಲದೇ, ವಿಜಯನಗರದಲ್ಲಿರವ ಅವರ ಶಾಸಕರ ಕಚೇರಿಯನ್ನು ಖಾಲಿ ಮಾಡಿದ್ದು, ಅವರ ಶಾಸಕ ಕಚೇರಿ ಎಂಬ ಬೋರ್ಡನ್ನು ಕ್ರೇನ್ ಮೂಲಕ ತೆರವುಗೊಳಸಲಾಗಿದೆ. ಮಾತ್ರವಲ್ಲ ಇಲ್ಲಿ ಶಾಸಕರು ಲಭ್ಯವಿಲ್ಲ ಎಂದು ಬೋರ್ಡ್‌ ಸಹ ಹಾಕಲಾಗಿದೆ.

ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಗೆ ಸೇರಿದ ಬಳಿಕ ಸಚಿವ ಸ್ಥಾನವನ್ನು ಪಡೆದುಕೊಂಡಿರುವ ಆನಂದ್ ಸಿಂಗ್‌ ಅವರು ಸಚಿವ ಸ್ಥಾನದ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ: ಚೆಸ್‌ ಚಾಂಪಿಯನ್‌ ವಿಶ್ವನಾಥ್‌ ಆನಂದ್‌ಗೆ ಮೋಸ ಮಾಡಿದ್ರಾ ನಟ ಸುದೀಪ್‌? ಚೆಸ್‌ ಕೋಚ್‌ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights