ದೆಹಲಿಯಲ್ಲಿ ವಾಯುಮಾಲಿನ್ಯ: ರಾಜಧಾನಿಯಿಂದ ಗೋವಾಗೆ ಸೋನಿಯಾಗಾಂಧಿ ಶಿಫ್ಟ್‌!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ವಿಪರೀತ ಹೆಚ್ಚಾಗುತ್ತಿದ್ದು, ಅಲ್ಲಿಯ ಜನರಿಗೆ ಉಸಿರಾಟಕ್ಕೆ ಭಾರೀ ತೊಂದರೆಯಾಗುತ್ತಿದ್ದು, ಹಲವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಎದೆಗೆ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವೈದ್ಯರ ಸಲಹೆ ಮೇಲೆಗೆ ದೆಹಲಿಯಿಂದ ಗೋವಾಗೆ ತೆರಳಿಸಿದ್ದಾರೆ.

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ ಸ್ವಲ್ಪ ಸಮಯದವರೆಗೆ ಬೆಚ್ಚಗಿನ ಸ್ಥಳಕ್ಕೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಕಾರ್ಯಕರ್ತರು ತಿಳಿಸಿದ್ದಾರೆ. ಈ ಹಿನ್ನೆಲೆ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಗಾಂಧಿಯೊಂದಿಗೆ ಗೋವಾದ ಪಣಜಿಗೆ ಬಂದಿಳಿದಿದ್ದಾರೆ.

ದಿವಂಗತ ಪ್ರಧಾನಿ ಇಂದಿರ ಗಾಂಧಿಯವರ 103 ನೇ ಜನ್ಮ ದಿನಾಚರಣೆಯಂದು ಗೌರವ ಸಲ್ಲಿಸಲು ಕೂಡ 73 ವರ್ಷದ ಸೋನಿಯಾ ಅವರು ಇಂದಿರಾ ಗಾಂಧಿ ಸ್ಮಾರಕದಲ್ಲಿ ಕೆಲ ನಿಮಿಷಗಳಷ್ಟೇ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ರಾಷ್ಟ್ರವನ್ನು ವಿಭಜಿಸಲು ಬಿಜೆಪಿ ಹುಟ್ಟುಹಾಕಿದ ಪದ “ಲವ್ ಜಿಹಾದ್”: ಅಶೋಕ್ ಗೆಹ್ಲೋಟ್

“ಸೋನಿಯಾ ಗಾಂಧಿ ಅವರಿಗೆ ಒಂದು ತಿಂಗಳಿನಿಂದ ದೀರ್ಘಕಾಲದ ಎದೆ ಸೋಂಕು ಇದೆ. ದೆಹಲಿಯಲ್ಲಿ ಅಪಾಯಕಾರಿ ವಾಯುಮಾಲಿನ್ಯದಿಂದಾಗಿ ಇದು ಸುಧಾರಿಸುತ್ತಿಲ್ಲ. ಭಾರೀ ವಾಯುಮಾಲಿನ್ಯ ಅವರ ಅಸ್ತಮಾ ಮತ್ತು ಎದೆ ಸೋಂಕನ್ನು ಉಲ್ಬಣಗೊಳಿಸಿದೆ. ಹಾಗಾಗಿ, ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ ದೆಹಲಿಯಿಂದ ಹೊರಹೋಗುವಂತೆ ವೈದ್ಯರು ಸಲಹೆ ನೀಡಿದರು” ಎಂದು ಹೆಸರೇಳಲು ಇಚ್ಛಿಸದ ಕಾರ್ಯಕರ್ತರು ತಿಳಿಸಿದ್ದಾರೆ.

ಜುಲೈ 30 ರಂದು ಸೋನಿಯಾ ಗಾಂಧಿಯನ್ನು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಕಳೆದ ಆಗಸ್ಟ್‌ನಲ್ಲಿ ಸೋನಿಯಾ ಗಾಂಧಿಯವರು ಆಸ್ಪತ್ರೆಯಿಂದ ಬಿಡುಗಡೆಯಾದಾಗಿನಿಂದ ನಿಯಮಿತವಾಗಿ ಔಷಧಗಳನ್ನು ಸೇವಿಸುತ್ತಿದ್ದರು. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದ ಕಾರಣ ವೈದ್ಯರು ಕಳವಳ ವ್ಯಕ್ತಪಡಿಸಿದ್ದರು’ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಕಾಂಗ್ರೆಸ್ಸಿಗರಿಂದಲೇ ಕಾಂಗ್ರೆಸ್‌ ದುರ್ಬಲಗೊಳ್ಳುತ್ತಿದೆ: ಮಲ್ಲಿಕಾರ್ಜುನ ಖರ್ಗೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights