Cricket : ನಿವೃತ್ತಿ ನಂತರ Yuvraj ಏನ್ ಮಾಡ್ತಾರೆ..? : ಮನದಾಳ ಹಂಚಿಕೊಂಡ ಯುವಿ..!

ಆಲ್ರೌಂಡರ್ ಯುವರಾಜ್ ಸಿಂಗ್ ಟೀಮ್ ಇಂಡಿಯಾದ ಶ್ರೇಷ್ಟ ಕ್ರಿಕೆಟರ್ ಗಳಲ್ಲಿ ಒಬ್ಬರು. ತಮ್ಮ ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚುವ ಮೂಲಕ ಯುವರಾಜ್ ಅತ್ಯುತ್ತಮ ಮ್ಯಾಚ್ ವಿನ್ನರ್ ಎನಿಸಿಕೊಂಡವರು. ಸದ್ಯ ಯುವಿ ಟೀಮ್ ಇಂಡಿಯಾದಲ್ಲಿ ಇಲ್ಲ. 2019ರ ಏಕದಿನ ವಿಶ್ವಕಪ್ ನ ಭಾರತ ತಂಡದಲ್ಲಿ ಅವಕಾಶ ಸಿಗಬಹುದೇ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ.

ಮನೀಶ್ ಪಾಂಡೆ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯರಂತಹ ಆಟಗಾರರ ಆಗಮನದಿಂದ ಯುವಿ ಹೊರಗುಳಿಯಬೇಕಾಗಿದೆ. ಫಾರ್ಮ್ ಹಾಗೂ ಫಿಟ್ನೆಸ್ ಕೊರತೆಯೂ ಟೀಮ್ ಇಂಡಿಯಾದಲ್ಲಿ ಸ್ಥಾನ ವಂಚಿತರಾಗಲು ಕಾರಣವಾಗಿದೆ. ಆದರೆ ತಮ್ಮಲ್ಲಿ ಇನ್ನೂ ಒಂದೆರಡು ವರ್ಷಗಳ ಕಾಲ ಕ್ರಿಕೆಟ್ ಆಡುವ ಸಾಮರ್ಥ್ಯ ಎಂದಿರುವ ಯುವರಾಜ್, ಕಮ್ ಬ್ಯಾಕ್ ಮಾಡಲು ಹವಣಿಸುತ್ತಿದ್ದಾರೆ.

ಯುವರಾಜ್ ನಿವೃತ್ತಿ ನಂತರದ ಯೋಜನೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ‘ ಕಮೆಂಟರಿ ಮಾಡುವುದು ನನ್ನಿಂದ ಸಾಧ್ಯವಿಲ್ಲ. YouWeCan ಫೌಂಡೇಶನ್ ಮೂಲಕ ಕ್ಯಾನ್ಸರ್ ಪೀಡಿತರ ಸಹಾಯ ಮಾಡಲು ಬಯಸುತ್ತೇನೆ. ಯುವ ಆಟಗಾರರಿಗೆ ಪ್ರೋತ್ಸಾಹ ನೀಡುವುದು, ಯುವ ಪೀಳಿಗೆಯ ಜೊತೆ ಸಂವಹನ ನಡೆಸುವುದು ನನಗಿಷ್ಟ. ಕೋಚಿಂಗ್ ಮಾಡುವ ಯೋಚನೆ ಕೂಡ ನನ್ನ ತಲೆಯಲ್ಲಿದೆ. ಮೂಲಸೌಕರ್ಯಗಳ ಕೊರತೆ ಇರುವ ಮಕ್ಕಳನ್ನು ಗುರುತಿಸಿ, ಅವರ ಶಿಕ್ಷಣ ಹಾಗೂ ಕ್ರೀಡೆಗೆ ನೆರವು ನೀಡುವ ಬಗ್ಗೆ ಗಮನ ಹರಿಸುತ್ತೇನೆ ‘ ಎಂದು ಹೇಳಿದ್ದಾರೆ.

One thought on “Cricket : ನಿವೃತ್ತಿ ನಂತರ Yuvraj ಏನ್ ಮಾಡ್ತಾರೆ..? : ಮನದಾಳ ಹಂಚಿಕೊಂಡ ಯುವಿ..!

Leave a Reply

Your email address will not be published.

Social Media Auto Publish Powered By : XYZScripts.com