Vijay Hazare Trophy : ಮಯಂಕ್, ಕರುಣ್ ಶತಕ : ಓಡಿಸ್ಸಾ ವಿರುದ್ಧ ಕರ್ನಾಟಕಕ್ಕೆ ಜಯ

ಹಾಸನ ಜಿಲ್ಲೆಯ ಆಲೂರಿನ ಕೆಎಸ್ ಸಿಎ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ‘ಎ’ ಗುಂಪಿ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಓಡಿಸ್ಸಾ ವಿರುದ್ಧ 133 ರನ್ ಅಂತರದಿಂದ ಭರ್ಜರಿ ಜಯ ಗಳಿಸಿದೆ. ಈ ಜಯದ ಮೂಲಕ 14 ಪಾಯಿಂಟ್ ಗಳನ್ನು ಸಂಪಾದಿಸಿರುವ ಕರ್ನಾಟಕ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದೆ.

ಟಾಸ್ ಗೆದ್ದ ಓಡಿಸ್ಸಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಗದಿತ 50 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 353 ರನ್ ಕಲೆ ಹಾಕಿತು. ಶತಕ ಸಿಡಿಸಿದ ಆರಂಭಿಕ ಬ್ಯಾಟ್ಸಮನ್ ಗಳಾದ ಮಯಂಕ್ ಅಗರವಾಲ್ 102 ಹಾಗೂ ಕರುಣ್ ನಾಯರ್ 100 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಓಡಿಸ್ಸಾ 41 ಓವರುಗಳಲ್ಲಿ 220 ಕ್ಕೆ ಆಲೌಟ್ ಆಯಿತು. ಅರ್ಧಶತಕ ಬಾರಿಸಿದ ಓಡಿಸ್ಸಾದ ರಾಜೇಶ್ ಧುಪೆರ್ 53, ಅನುರಾಗ್ ಸಾರಂಗಿ 58 ರನ್ ಗಳಿಸಿದರು. ಕರ್ನಾಟಕದ ಪರವಾಗಿ ಜಗದೀಶ್ ಸುಚಿತ್ 5, ಕೆ.ಗೌತಮ್ 2, ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com