ಶೌಚಾಲಯಕ್ಕೂ ಕೇಸರಿ ಬಣ್ಣ ಬಳಿದ ಯೋಗಿ ಆದಿತ್ಯನಾಥ್ ಸರ್ಕಾರ

ಲಖನೌ : ಯೋಗಿ ಆದಿತ್ಯನಾಥ್‌ ಆಡಳಿತದ ಉತ್ತರ ಪ್ರದೇಶದಲ್ಲಿ ಎಲ್ಲವೂ ಕೇಸರೀಮಯವಾಗುತ್ತಿದೆ. ಹಜ್‌ ಭವನ, ಸರ್ಕಾರಿ ಕಚೇರಿಗಳಿಗೆ ಕೇಸರಿ ಬಣ್ಣ ಬಳಿದಿದ್ದ ಉತ್ತರ ಪ್ರದೇಶ ಸರ್ಕಾರ ಈಗ ಶೌಚಾಲಯಗಳಿಗೂ ಕೇಸರಿ ಬಣ್ಣ ಬಳಿದಿದೆ.

ಇತ್ತೀಚೆಗಷ್ಟೇ ಲಖನೌದ ಸರ್ಕಾರಿ ಸಂಕೀರ್ಣಗಳು, ಪೊಲೀಸ್‌ ಠಾಣೆ, ಗೋರಕ್‌ ಪುರದ ದೊಡ್ಡ ಗಡಿಯಾರದ ಕಂಬ, ಕೇಸರ್‌ ಬಸ್‌, ಹಜ್‌ ಭವನಕ್ಕೆ ಕೇಸರಿ ಬಣ್ಣ ಬಳಿಯಲಾಗಿತ್ತು. ಈಗ ನೂತನವಾಗಿ ನಿರ್ಮಾಣಗೊಂಡಿರುವ 100 ಶೌಚಾಲಯಗಳ ಗೋಡೆಗೂ ಕೇಸರಿ ಬಣ್ಣ ಬಳಿಯಲಾಗಿದೆ.

ಯೋಗಿ ಸರ್ಕಾರದ ಈ ನಡೆಯನ್ನು ಗ್ರಾಮಸ್ಥರು ಸ್ವಾಗತಿಸಿದ್ದಾರೆ. ಸಮುದಾಯ ಶೌಚಾಲಯಕ್ಕೆ ಬಣ್ಣ ಬಳಿಯುವ ಕುರಿತು ಈ ವರ್ಷದ ಆರಂಭದಲ್ಲೇ ಗ್ರಾಮಸ್ಥರಿಗೆ ತಿಳಿಸಲಾಗಿತ್ತು. ಎಲ್ಲರ ಒಮ್ಮತದಿಂದ ಈ ಬಣ್ಣ ಬಳಿಯಲಾಗಿದೆ.

ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಅಖಿಲೇಶ್ ಯಾದವ್‌,ಯೋಗಿ  ಸರ್ಕಾರ ಎಲ್ಲಾ ಕಡೆ ಕೇಸರಿ ಬಳಿದು ಧರ್ಮಕ್ಕೆ ಅವಮಾನವೆಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com