ಸರಳ ಸಮಾರಂಭದಲ್ಲಿ ರಿಂಗ್‌ ಬದಲಿಸಿಕೊಂಡ ಪವನ್‌ ಒಡೆಯರ್‌ – ಅಪೇಕ್ಷಾ

ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಈ ಬಾರಿ ಒಬ್ಬರ ನಂತರ ಒಬ್ಬರ ಮದುವೆ ವಿಷಯ ಪ್ರಸ್ತಾಪವಾಗುತ್ತಿದೆ. ಈ ಸಾಲಿಗೀಗ ನಿರ್ದೇಶಕ ಪವನ್‌ ಒಡೆಯರ್‌ ಹಾಗೂ ನಟಿ ಅಪೇಕ್ಷಾ ಸೇರಿದ್ದಾರೆ. ನಿರ್ದೇಶಕ ಪವನ್‌ ಒಡೆಯರ್‌, ನಟಿ ಅಪೇಕ್ಷಾ ಪುರೋಹಿತ್‌ ಅವರ ನಿಶ್ಚಿತಾರ್ಥ ಬಾಗಲಕೋಟೆಯಲ್ಲಿ ನೆರವೇರಿದೆ.

ಸರಳ ಸಮಾರಂಭದಲ್ಲಿ ಎರಡು ಕುಟುಂಬಗಳ ಆಪ್ತರಷ್ಟೇ ಭಾಗಿಯಾಗಿದ್ದು, ಇಬ್ಬರೂ ಉಂಗುರ ಬದಲಿಸಿಕೊಂಡಿದ್ದಾರೆ. ಬಳಿಕ ಪೂಜೆ ನೆರವೇರಿಸಿದ್ದಾರೆ.

ಇತ್ತೀಚೆಗಷ್ಟೇ ಪವನ್‌ ಒಡೆಯರ್, ನಟಿ ಅಪೇಕ್ಷಾರನ್ನು ವರಿಸುವುದಾಗಿ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದರು.

ಅಪೇಕ್ಷಾ ಪುರೋಹಿತ್‌ ಟಿ.ಎನ್‌ ಸೀತಾರಾಂ ಅವರ ನಿರ್ದೇಶನದ ಕಾಫಿತೋಟ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

 

 

 

 

Leave a Reply

Your email address will not be published.

Social Media Auto Publish Powered By : XYZScripts.com