ಕೇಂದ್ರದ ಕೃಷಿ ಯೋಜನೆಗಳಿಗೆ ಅಕ್ಷಯ್‌ ಕುಮಾರ್ ರಾಯಭಾರಿ

ದೆಹಲಿ : ಕೇಂದ್ರ ಸರ್ಕಾರದ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಚಾರದ ರಾಯಭಾರಿಯಾಗಿ ಬಾಲಿವುಟ್ ನಟ ಅಕ್ಷಯ್‌ ಕುಮಾರ್‌  ಆಯ್ಕೆಯಾಗಿದ್ದಾರೆ.

ಕೃಷಿ ಯೋಜನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಟಿವಿ ಜಾಹೀರಾತಿನ ಮೂಲಕ ಜನರನ್ನು ತಲುಪಲು ನಿರ್ಧರಿಸಿದೆ. ಇದಕ್ಕಾಗಿ ಬಾಲಿವುಡ್ ನಟ ಅಕ್ಷಯ್‌ ಕುಮಾರ್ ಅವರನ್ನು ಪ್ರಚಾರದ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ.

ರೈತರ ಲಾಭಕ್ಕಾಗಿ ಇರುವ ಪ್ರಮುಖ ಯೋಜನೆಗಳು ಜನರಿಗೆ ತಲುಪಬೇಕು. ಇದರ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಇದರಿಂದ ರೈತರಿಗೆ ಸಾಕಷ್ಟು ಲಾಭವಾಗಲಿದೆ. ಇದಕ್ಕಾಗಿ ಟಿವಿ ಜಾಹೀರಾತುಗಳಿಗಾಗಿ ಅಕ್ಷಯ್‌ ಕುಮಾರ್‌ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com