Ranaji Quarter Final : ವಿನಯ್ ಹ್ಯಾಟ್ರಿಕ್ ಸಾಧನೆ : ಅಲ್ಪ ಮೊತ್ತಕ್ಕೆ ಮುಂಬೈ ಆಲೌಟ್

ಕರ್ನಾಟಕ ಹಾಗೂ ಮುಂಬೈ ತಂಡಗಳ ನಡುವೆ ರಣಜಿ ಕ್ವಾರ್ಟರ್ ಫೈನಲ್ ಪಂದ್ಯ ಗುರುವಾರ ನಾಗ್ಪುರದಲ್ಲಿ ಆರಂಭಗೊಂಡಿದೆ. ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ದುಕೊಂಡಿತು.

ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ, ವೇಗಿ ವಿನಯ್ ಕುಮಾರ್ ಮಾರಕ ದಾಳಿಗೆ ಸಿಲುಕಿ 173 ಕ್ಕೆ ಆಲೌಟ್ ಆಯಿತು. ಮುಂಬೈ ಪರವಾಗಿ ಧವಲ್ ಕುಲಕರ್ಣಿ 75 ಹಾಗೂ ಅಖಿಲ್ ಹೆರವಾಡ್ಕರ್ 32 ರನ್ ಗಳಿಸಿದರು. ಹ್ಯಾಟ್ರಿಕ್ ಸಾಧನೆ ಮಾಡಿದ ಕರ್ನಾಟಕದ ನಾಯಕ ವಿನಯ್ ಕುಮಾರ್, ಮುಂಬೈ ತಂಡದ 6 ವಿಕೆಟ್ ಪಡೆದರು.

ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ, ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 115 ಸೇರಿಸಿದ್ದು, ಇನ್ನೂ 58 ರನ್ ಹಿನ್ನಡೆಯಲ್ಲಿದೆ. 40 ರನ್ ಗಳಿಸಿದ ಆರಂಬಿಕ ಬ್ಯಾಟ್ಸಮನ್, ಆರ್ ಸಮರ್ಥ್ ಶಿವಮ್ ದುಬೆಗೆ ವಿಕೆಟ್ ಒಪ್ಪಿಸಿದರು. ಅರ್ಧಶತಕ ಬಾರಿಸಿರುವ ಮಯಂಕ್ ಅಗರವಾಲ್ (62*) ಹಾಗೂ ಕೌನೇನ್ ಅಬ್ಬಾಸ್ (12*) ಅಜೇಯರಾಗುಳಿದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com