ಚಾಂಪಿಯನ್ಸ್ ಟ್ರೋಫಿ : ಮೊದಲ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ – ಪಾಕ್ ಹಣಾಹಣಿ

ಕಾರ್ಡಿಫ್ ನಲ್ಲಿ ಬುಧವಾರ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಡೆಯಲಿದೆ.
ಕಳೆದ ಬಾರಿ ಭಾರತದ ಎದುರು ಫೈನಲ್ ನಲ್ಲಿ ಸೋಲು ಅನುಭವಿಸಿದ್ದ ಇಂಗ್ಲೆಂಡ್ ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 3 ವಿಕೆಟ್ ರೋಚಕ ಗೆಲುವು ಸಾಧಿಸಿರುವ ಪಾಕಿಸ್ತಾನ ಕೂಡ ಗೆಲುವಿನ ವಿಶ್ವಾಸದಲ್ಲಿದೆ.

‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ ಹಾಗೂ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನ,
ಎರಡೂ ತಂಡಗಳು ಫೈನಲ್ ತಲುಪಲು ಹೋರಾಟ ನಡೆಸಲಿವೆ. ತವರಿನಲ್ಲಿ ಆಡುತ್ತಿರುವುದು ಸಹಜವಾಗಿಯೇ
ಇಂಗ್ಲೆಂಡ್ ಗೆ ಪ್ಲಸ್ ಪಾಯಿಂಟ್ ಆಗಲಿದೆ. ಗ್ರೂಪ್ ಹಂತದಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ಗಳನ್ನು
ಮಣಿಸಿರುವ ಇಂಗ್ಲೆಂಡ್ ಕೂಡ ಜಯದ ವಿಶ್ವಾಸದಲ್ಲಿದೆ. ಆದರೆ ಅನಿರೀಕ್ಷಿತ, ಅಚ್ಚರಿ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯವನ್ನು
ಪಾಕಿಸ್ತಾನ ಹೊಂದಿರುವುದರಿಂದ ಕ್ರಿಕೆಟ್ ಪ್ರೇಮಿಗಳಲ್ಲಿ ಈ ಪಂದ್ಯ ಕುತೂಹಲ ಮೂಡಿಸಿದೆ. ಭಾರತೀಯ ಉಪಖಂಡದ ಭಾರತ, ಪಾಕಿಸ್ತಾನ
ಹಾಗೂ ಬಾಂಗ್ಲಾದೇಶ, ಮೂರೂ ತಂಡಗಳು ಸೆಮಿಫೈನಲ್ ನಲ್ಲಿ ಆಡುತ್ತಿರುವುದು ವಿಶೇಷ.

ತಂಡಗಳು ಹೀಗಿವೆ:
ಇಂಗ್ಲೆಂಡ್ : ಇಯಾನ್ ಮಾರ್ಗನ್ (ನಾಯಕ) , ಜೋಸ್ ಬಟ್ಲರ್, ಜೇಸನ್ ರಾಯ್, ಅಲೆಕ್ಸ್ ಹೇಲ್ಸ್, ಜೋ ರೂಟ್, ಬೆನ್ ಸ್ಟೋಕ್ಸ್, ಮೋಯಿನ್ ಅಲಿ, ಆದಿಲ್ ರಾಶಿದ್, ಲಿಯಮ್ ಪ್ಲಂಕೆಟ್, ಮಾರ್ಕ್ ವುಡ್, ಜೇಕ್ ಬಾಲ್, ಡೇವಿಡ್ ವಿಲ್ಲೀ, ಜಾನಿ ಬೇರ್ ಸ್ಟೊವ್, ಸ್ಯಾಮ್ ಬಿಲ್ಲಿಂಗ್ಸ್, ಸ್ಟೀವನ್ ಫಿನ್.

ಪಾಕಿಸ್ತಾನ : ಸರ್ಫರಾಜ್ ಅಹ್ಮದ್ (ನಾಯಕ), ಅಝರ್ ಅಲಿ, ಫಖರ್ ಜಮಾನ್, ಬಾಬರ್ ಆಜಮ್, ಮೊಹಮ್ಮದ್ ಹಫೀಜ್, ಶೋಯೇಬ್ ಮಲಿಕ್, ಇಮದ್ ವಾಸೀಂ, ಫಾಹಿಮ್ ಅಶ್ರಫ್, ಮೊಹಮ್ಮದ್ ಆಮಿರ್, ಜುನೈದ್ ಖಾನ್, ಹಸನ್ ಅಲಿ, ಹ್ಯಾರಿಸ್ ಸೋಹೈಲ್, ಶಾದಾಬ್ ಖಾನ್, ಅಹ್ಮದ್ ಶೆಹಜಾದ್, ರುಮಾನ್ ರಯೀಸ್, ವಹಾಬ್ ರಿಯಾಝ್.

One thought on “ಚಾಂಪಿಯನ್ಸ್ ಟ್ರೋಫಿ : ಮೊದಲ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ – ಪಾಕ್ ಹಣಾಹಣಿ

  • ಅಕ್ಟೋಬರ್ 25, 2017 at 10:03 ಫೂರ್ವಾಹ್ನ
    Permalink

    Well I sincerely enjoyed studying it. This post offered by you is very effective for correct planning.

Comments are closed.

Social Media Auto Publish Powered By : XYZScripts.com