ಕೊಹ್ಲಿ ಮತ್ತು ಅನುಷ್ಕಾ ನಿಶ್ಚಿತಾರ್ಥಕ್ಕೆ ಮಹೂರ್ತ ಫಿಕ್ಸ್!

ಭಾರತ ಕ್ರಿಕೆಟ್ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರ ನಿಶ್ಚಿತಾರ್ಥ ಸಮಾರಂಭ ಜನವರಿ ಒಂದರಂದು ನಡೆಯಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.


ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್‍ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ. ವಿರಾಟ್ ಕೊಹ್ಲಿ ಅನುಷ್ಕಾ ನಡುವಿನ ಸಂಬಂಧ ಹಲವಾರು ಬಾರಿ ಏರಿಳಿತಗಳನ್ನು ಕಂಡಿದೆ. ಕೆಲವು ಬಾರಿ ವಿರಾಟ್ ಕೊಹ್ಲಿ ಆಟ ಚೆನ್ನಾಗಿ ಆಡಲಿಲ್ಲವಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನ ಅನುಷ್ಕಾರನ್ನು ಬೈದಿದ್ದು ಉಂಟು. ಆದರೆ ಅನುಷ್ಕಾಳನ್ನು ಬೈದಾಗ ಕೊಹ್ಲಿ ವಿರೋಧಿಸುತ್ತಿದ್ದರು.

ಕ್ರಿಕೆಟ್ ನಿಂದ ಬಿಡುವು ಸಿಕ್ಕಾಗ ಕೆಲವೆಡೆ ಕೈ ಹಿಡಿದು ಓಡಾಡುತ್ತಾ ಸುದ್ದಿವಾಹಿನಿಗಳಿಗೆ ಸುದ್ದಿಯಾಗುತ್ತಿದ್ದ ಈ ಜೋಡಿ ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಜೊತೆ ಜೊತೆಯಲ್ಲಿ ಸುತ್ತಾಡುತ್ತಾ ಎಂಜಾಯ್‌ ಮಾಡುತ್ತಿರುವ ಇಬ್ಬರು ಜನವರಿ ಒಂದರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

ಹೊಸ ವರ್ಷ ಸಂಭ್ರಮಾಚರಣೆಗಾಗಿ ಉತ್ತರಖಂಡ್ ನ ಡೆಹರಾಡೂನ್ ಗೆ ತೆರಳಿರುವ ಪ್ರಣಯ ಪಕ್ಷಿಗಳು ಅಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡು ಇಬ್ಬರ ನಡುವೆ ಇರುವ ಗುಸುಗುಸುಗಳಿಗೆ ವಿದಾಯ ಹೇಳಲು ಮುಂದಾಗಿದ್ದಾರೆ. ನಿಶ್ಚಿತಾರ್ಥಕ್ಕೆ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಉದ್ಯಮಿ ಅನಿಲ್ ಅಂಬಾನಿ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ನಿಶ್ಚಿತಾರ್ಥ ದಿನಾಂಕದ ವಿಚಾರಕ್ಕೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಇದುವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

One thought on “ಕೊಹ್ಲಿ ಮತ್ತು ಅನುಷ್ಕಾ ನಿಶ್ಚಿತಾರ್ಥಕ್ಕೆ ಮಹೂರ್ತ ಫಿಕ್ಸ್!

  • October 20, 2017 at 6:47 PM
    Permalink

    I’d must check with you here. Which isn’t something I often do! I enjoy reading a submit that will make folks think. Also, thanks for permitting me to comment!

Comments are closed.

Social Media Auto Publish Powered By : XYZScripts.com